ಮನುಷ್ಯತ್ವವಿಲ್ಲದ ವೈದ್ಯರ ಸ್ವಾರ್ಥಕ್ಕೆ 30 ಜನ ಬಲಿ, ರೋಗಿಗಳ ಅರಣ್ಯರೋದನ

ಈ ಸುದ್ದಿಯನ್ನು ಶೇರ್ ಮಾಡಿ

Pationts--00001

ಬೆಂಗಳೂರು, ನ.16- ಖಾಸಗಿ ವೈದ್ಯರ ಮುಷ್ಕರ ನಾಲ್ಕನೆ ದಿನವೂ ಮುಂದುವರಿದಿದೆ. ಸೂಕ್ತ ಚಿಕಿತ್ಸೆ ಸಿಗದೆ ಅಮಾಯಕ ರೋಗಿಗಳ ಸಾವು-ನೋವುಗಳು ಕೂಡ ರಾಜ್ಯಾದ್ಯಂತ ಮುಂದುವರಿದಿದೆ. ಈವರೆಗೆ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ವರದಿಯಾಗಿದೆ. ಇಷ್ಟು ಸಾವು-ನೋವು ಸಂಭವಿಸಿದರೂ ವೈದ್ಯರಿಗೆ ಕರುಣೆ ಬರುತ್ತಿಲ್ಲ. ಸರ್ಕಾರ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಸಾರ್ವಜನಿಕ ವಲಯದಲ್ಲಿ ವೈದ್ಯರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರ ಮುಷ್ಕರ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯದಿರುವುದರ ಬಗ್ಗೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ಖಾಸಗಿ ವ್ಯೆಧ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ ಬೇಕೇ..? ಬೇಡವೇ ?

View Results

ಬೆಂಗಳೂರಿನ ಕೊಲಂಬಿಯಾ ಏಷಿಯಾ, ಕಿಮ್ಸ್, ಸಾಗರ್, ಅಪೋಲೋ, ಪೆನೆಷಿಯಾ, ಪ್ರಿಸ್ಟಿನ್, ಬೆಳಗಾವಿ, ಕೊಪ್ಪಳ, ಧಾರವಾಡ, ಹಾಸನ, ಚಿತ್ರದುರ್ಗ ಸೇರಿದಂತೆ ಬಹುತೇಕ ಕಡೆ ಖಾಸಗಿ ಆಸ್ಪತ್ರೆಗಳು ಇಂದು ಎಲ್ಲ ಸೇವೆಗಳನ್ನೂ ಸ್ಥಗಿತಗೊಳಿಸಿದ್ದರಿಂದ ರೋಗಿಗಳು ಪರದಾಡುವಂತಾಯಿತು.  ಖಾಸಗಿ ಆಸ್ಪತ್ರೆಗಳು ಅಮಾಯಕರನ್ನು ಸುಲಿಗೆ ಮಾಡುವುದು ಮಾಮೂಲಿಯಾಗಿರುವ ಸಂದರ್ಭದಲ್ಲಿ ಇದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ವಿಧೇಯಕ ಜಾರಿಗೆ ತರಲು ಮುಂದಾಗಿದೆ. ಇದನ್ನು ವಿರೋಧಿಸುವುದಕ್ಕೆ ಸಾಕಷ್ಟು ವೇದಿಕೆಯಿದೆ. ಕಾನೂನು ಹೋರಾಟ ನಡೆಸಬಹುದಾಗಿದೆ. ಆದರೆ, ರೋಗಿಗಳನ್ನು ಒತ್ತೆಯಾಳನ್ನಾಗಿಟ್ಟುಕೊಂಡು ವೈದ್ಯರು ಪ್ರತಿಭಟನೆ ಮಾಡುವ ಮೂಲಕ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಎಂಎ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಮೂರು ದಿನಗಳಿಂದ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದು, ಇಂದು ಕೂಡ ಹೊರರೋಗಿಗಳ ವಿಭಾಗವನ್ನು ಕೂಡ ಬಂದ್ ಮಾಡಿ ಪ್ರತಿಭಟನೆಗಿಳಿದಿದ್ದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಯಿತು.  ಬೇಡಿಕೆಗಳು ಈಡೇರದಿದ್ದರೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ. ಸಾರ್ವಜನಿಕರ ಹಿತಾಸಕ್ತಿಯಿಂದ ವಿಧೇಯಕ ಮಂಡಿಸುತ್ತಿದ್ದೇವೆ. ವೈದ್ಯರು ಮುಷ್ಕರ ಕೈಬಿಡಬೇಕೆಂದು ಸರ್ಕಾರ ಮನವಿ ಮಾಡಿದೆ.

ಈ ಹಗ್ಗ-ಜಗ್ಗಾಟದ ನಡುವೆ ಹಲವಾರು ಅಮಾಯಕರು ಬಲಿಯಾಗುತ್ತಿದ್ದಾರೆ. ಇನ್ನೂ ಎಷ್ಟು ಜನ ಬಲಿಯಾಗಬೇಕು..? ವಿಧೇಯಕ ಮಂಡನೆಗೆ ನಮ್ಮ ವಿರೋಧವಿಲ್ಲ. ಆದರೆ, ಅದರಲ್ಲಿರುವ ಕೆಲವು ಅಂಶಗಳನ್ನು ಕೈಬಿಡಬೇಕೆಂದು ಆಗ್ರಹಿಸಿದ್ದೇವೆ ಎಂದು ಪ್ರತಿಭಟನಾ ನೇತೃತ್ವ ವಹಿಸಿರುವ ಡಾ.ರವೀಂದ್ರ ತಿಳಿಸಿದ್ದಾರೆ.  ರೋಗಿಗಳು ಮತ್ತು ವೈದ್ಯರ ನಡುವಿನ ಸಂಬಂಧ ಹಾಳು ಮಾಡುವಂತಹ ಅಂಶಗಳು ವಿಧೇಯಕದಲ್ಲಿವೆ. ಈ ಅಂಶಗಳನ್ನು ಕೈ ಬಿಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಕೈ ಬಿಡುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ. ನಮಗೂ ಮಾನವೀಯತೆ ಇದೆ. ಸರ್ಕಾರ ನಮ್ಮ ಸಮಸ್ಯೆಗಳ ಬಗ್ಗೆಯೂ ನೋಡಬೇಕೆಂದು ಹೇಳಿದ್ದಾರೆ. ದಿನೇ ದಿನೇ ವೈದ್ಯರ ಮುಷ್ಕರ ಹೆಚ್ಚಾದಂತೆ ಸಾರ್ವಜನಿಕರ ಆಕ್ರೋಶವೂ ಕೂಡ ಹೆಚ್ಚಾಗತೊಡಗಿದೆ. ಮೊದಲೇ ಖಾಸಗಿ ಆಸ್ಪತ್ರೆಗಳವರ ಆಟಾಟೋಪಗಳಿಗೆ ಜನ ಬೇಸತ್ತಿದ್ದಾರೆ.

Facebook Comments

Sri Raghav

Admin