ಮನುಷ್ಯನ ಉಜ್ವಲ ಭವಿಷ್ಯಕ್ಕಾಗಿ ಜ್ಞಾನವು ಅಷ್ಟೇ ಮುಖ್ಯ

ಈ ಸುದ್ದಿಯನ್ನು ಶೇರ್ ಮಾಡಿ

10
ಮುಂಡಗೋಡ,ಫೆ.6- ದೀಪ ಪ್ರಕಾಶವಾಗಿ ಬೆಳಗಲು ಎಣ್ಣೆ ಎಷ್ಟು ಮುಖ್ಯವೊ ಮನುಷ್ಯನ ಉಜ್ವಲ ಭವಿಷ್ಯಕ್ಕಾಗಿ ಜ್ಞಾನವು ಅಷ್ಟೇ ಮುಖ್ಯ. ಭಗವಂತ ನೀಡಿದ ಜ್ಞಾನದಿಂದ ಉತ್ತಮ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಪಣ ತೊಡಬೇಕಿದೆ ಎಂದು ಹನುಮಾಪುರ ಕಾಳಿಕಾ ಮಠದ ಶ್ರೀ ಸದಾನಂದ ಶಿವಾಚಾರ್ಯ ಸ್ವಾಮಿಗಳು ಹೇಳಿದರುನಿನ್ನೆ ನಗರದ ಬಂಕಾಪುರ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಧನಾ ಸಮಾವೇಶದ ಸಭಾ ಕಾರ್ಯಕ್ರಮದ ಸಾನಿದ್ಯವಹಿಸಿ ಅವರು ಮಾತನಾಡಿದರು.
ಧಾರ್ಮಿಕ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸುವುದರಿಂದ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರೊಂದಿಗೆ ಅಧ್ಯಾತ್ಮಕ ಚಿಂತನೆ ಮೂಡಿಸಲು ಸಾಧ್ಯವಾಗುತ್ತಿದ್ದು, ಆರ್ಥಿಕ ಮುಗ್ಗಟ್ಟು ನೀಗಿಸುವ ಹಾಗೂ ಜನರನ್ನು ವ್ಯಸನಮುಕ್ತಗೊಳಿಸಿ ಸುಖ, ಶಾಂತಿ, ನೆಮ್ಮದಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ಸೇರಿದಂತೆ ಸಮಾಜದ ಶೋಷಿತ ವರ್ಗದ ಏಳ್ಗೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ತೀವ್ರ ಶ್ರಮ ವಹಿಸುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಯಾವುದೇ ಶರತ್ತಿಲ್ಲದೆ ಸಾಲ ನೀಡಿ ಬಡವರ ಏಳ್ಗೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಪ್ರಮುಖ ಪಾತ್ರವಹಿಸಿದೆ. ಈ ಸಂಸ್ಥೆಯ ಕಾರ್ಯದಿಂದ ಬಡ ಹಾಗೂ ನಿರ್ಗತಿಕರಿಗೆ ತೀವ್ರ ಸಹಕಾರಿಯಾಗಿದೆ. ಯಾವುದೇ ಸರ್ಕಾರದಿಂದ ಮಾಡಲಾಗದಂತಹ ಕೆಲಸವನ್ನು ಈ ಸಂಸ್ಥೆ ಮಾಡುತ್ತಿರುವುದು ಶ್ಲಾಘನಿಯ ಎಂದರು. ನಾಗಭೂಷಣ ಹಾವಣಗಿ ಅಧ್ಯಕ್ಷತೆ ವಹಿಸಿದ್ದರು. ಅಯ್ಯಪ್ಪಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ವಿನಾಯಕ ರಾಯ್ಕರ, ಓಂ ಎಚ್.ಪಿ ಗ್ಯಾಸ ವ್ಯವಸ್ಥಾಪಕ ಬಸವರಾಜ ಓಶಿಮಠ, ಉತ್ತರಕನ್ನಡ ಜಿಲ್ಲೆ ಶ್ರೀ.ಕ್ಷೇ.ಧ.ಗ್ರಾ.ಸಂ ನಿರ್ದೇಶಕ ಎಮ್. ಲಕ್ಷ್ಮಣ, ಕೃಷಿಕ ಸಮಾಜದ ಅಧ್ಯಕ್ಷ ಸಂಗಮೇಶ ಬಿದರಿ, ಶ್ರೀ.ಕ್ಷೇ.ಧ,ಗ್ರಾ.ಸಂ ಯೋಜನಾದಿಕಾರಿ ಕೇಶವ ದೇವಾಂಗ, ಮೇಲ್ವಿಚಾರಕ ಚಂದ್ರಪ್ಪ ಆಯ್.ಎಚ್ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin