ಮನೆಗಳ್ಳನ ಬಂಧನ : ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

beluru-house--robbery

ಬೇಲೂರು, ಸೆ.23- ಮನಗಳ್ಳನನ್ನು ಬಂಧಿಸಿರುವ ಅರೇಹಳ್ಳಿ ಪೊಲೀಸರು ಆತನಿಂದ ಸುಮಾರು 1.20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಂಕರ್ ಬಂಧಿತ ಆರೋಪಿ. ಈತ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದುದ್ದನ್ನು ಗಮನಿಸಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಗಸ್ಟ್ 27ರಂದು ಮಡಿಕೇರಿಯ ಸೋಮವಾರ ಪೇಟೆ ತಾಲ್ಲೂಕು ಕಾಜೂರು ಎಸ್ಟೇಟ್‍ನ ವ್ಯವಸ್ಥಾಪಕ ಅರುಣಾ ಎಂಬುವವರ ಮನೆಯ ಹೆಂಚುಗಳನ್ನು ತೆಗೆದು ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು 2800 ರೂ. ಕಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿದೆ.
ಆತನಿಂದ 8 ಚಿನ್ನದ ಉಂಗುರಗಳು, ಒಂದು ಮಗುವಿನ ಬ್ರಾಸ್ ಲೈಟ್, ಮೂರು ಮೂಗುತಿಗಳು, 2 ಕೊಂಡಿಗಳು, 2 ಚಿನ್ನದ ಬಳೆಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಒಟ್ಟು ಚಿನ್ನಾಭರಣಗಳ ತೂಕ 43 ಗ್ರಾಂಗಳಿದ್ದು, ಅವುಗಳ ಒಟ್ಟು ಬೆಲೆ 1.20 ಲಕ್ಷ ಎಂದು ಅಂದಾಜಿಸಲಾಗಿದೆ.
ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕಳ್ಳತನವಾದ ಮನೆಯವರು ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಂಯಾಗ ಬಂದನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊಲೀಸ್ ವೃತ್ತ ನೀರಿಕ್ಷಕ ಲೋಕೇಶ್ ಮಾಹಿತಿ ನೀಡಿದ್ದು, ಅರೇಹಳ್ಳಿ ಪಿಎಸ್‍ಐ ಚಂದ್ರಶೇಖರ್, ಎಎಸ್‍ಐ ಮಲ್ಲೇಶ್, ಸಿಬ್ಬಂದಿ ತಾಂಡವೇಶ್, ಜಮ್ರೂದ್ದಿನ್, ರವಿ, ನಿಂಗರಾಜು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin