ಮನೆಗೆ ನುಗ್ಗಿ, ಗನ್ ತೋರಿಸಿ ಅಪ್ರಾಪ್ರೆ ಮೇಲೆ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Rape--01

ಮುಜಾಫರ್‍ನಗರ್, ಡಿ.26-ಮನೆಯೊಂದಕ್ಕೆ ನುಗ್ಗಿದ ಇಬ್ಬರು ಯುವಕರು ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಮುಜಾಫರ್‍ನಗರ್ ನಗ್ಲಾ ಬಜುರ್ಗ್ ಗ್ರಾಮದಲ್ಲಿ ನಡೆದಿದೆ. ನಿನ್ನೆ ಈ ದುಷ್ಕøತ್ಯ ನಡೆದಿದ್ದು, ಇಬ್ಬರು ದುಷ್ಕರ್ಮಿಗಳು ಬಾಲಕಿಯ ಕೊಠಡಿಗೆ ನುಗ್ಗಿ ಆಕೆಯನ್ನು ಮಹಡಿ ಮೇಲೆ ಕರೆದೊಯ್ದರು. ಕಿರುಚಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಹೇಳಲಾಗಿದೆ. ಈ ಘಟನೆ ನಡೆದಾಗ ಬಾಲಕಿಯ ಪೋಷಕರು ಮನೆಯಲ್ಲೇ ಇದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಉತ್ತರ ಪ್ರದೇಶದ ಬಾಂಡದಲ್ಲಿ ಐದು ವರ್ಷದ ಬಾಲಕಿ ಮೇಲೆ ಆಕೆಯ ಚಿಕ್ಕಪ್ಪನೇ ಅತ್ಯಾಚಾರ ಎಸಗಿರುವ ನೀಚ ಕೃತ್ಯ ನಡೆದಿದೆ. ನಿನ್ನೆ ಈ ಘಟನೆ ನಡೆದಿದ್ದು, ಮನೆಯಲ್ಲಿ ಆಟವಾಡುತ್ತಿದ್ದ ಮಗುವನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ಡು ಓಂ ಪ್ರಕಾಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin