ಮನೆಗೆ ನುಗ್ಗಿ 1.50 ಲಕ್ಷ ನಗದು, 150 ಗ್ರಾಂ ಚಿನ್ನಾಭರಣ ಲೂಟಿ

ಈ ಸುದ್ದಿಯನ್ನು ಶೇರ್ ಮಾಡಿ

robbery

ಮಂಡ್ಯ,ಅ.26- ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರು ಮಹಿಳೆಯ ಕೈಕಾಲು ಕಟ್ಟಿ 1.50 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುತ್ತಲು ರಸ್ತೆಯ ಸಾಹುಕಾರ ಚನ್ನಯ್ಯ ಬಡಾವಣೆಯ 1ನೇ ಕ್ರಾಸ್‍ನ ನಿವಾಸಿ ರಾಮಚಂದ್ರ ಎಂಬುವರು ಕೋಳಿ ಫಾರಂ ಇಟ್ಟುಕೊಂಡಿದ್ದು, ನಿನ್ನೆ ಅಂಗಡಿಗೆ ತೆರಳಿದ ಸಮಯದಲ್ಲಿ, ತಾಯಿ ಚಿಕ್ಕತಾಯಮ್ಮ ಒಬ್ಬರೇ ಇರುವುದನ್ನು ಗಮನಿಸಿದ ಮೂವರು ದರೋಡೆಕೋರರು, ಮನೆಯೊಳಗೆ ನುಗ್ಗಿ ಚಿಕ್ಕತಾಯಮ್ಮನವರ ಕೈಕಾಲು ಕಟ್ಟಿ ಬಾಯಿ ಮುಚ್ಚಿ ರೂಂನಲ್ಲಿ ಕೂಡಿ ಹಾಕಿದ್ದಾರೆ.
ನಂತರ ಚಿಕ್ಕತಾಯಮ್ಮನ ಮಾಂಗಲ್ಯಸರ ಸೇರಿದಂತೆ 150 ಗ್ರಾಂ ಚಿನ್ನಾಭರಣ ಹಾಗೂ ಬೀರುವಿನಲ್ಲಿದ್ದ 1.50 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ರಾಮಚಂದ್ರ ಅವರು ಊಟಕ್ಕೆ ಬಂದ ನಂತರವೇ ದರೋಡೆ ನಡೆದಿರುವುದು ಕಂಡುಬಂದಿದೆ. ಕೂಡಲೇ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ಶಿವರುದ್ರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin