ಮನೆಯವರ ಇಚ್ಚೆಗೆ ವಿರುದ್ಧವಾಗಿ ವಿವಾಹವಾಗಿದ್ದ ಜೋಡಿಯನ್ನು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದರು..!

ಈ ಸುದ್ದಿಯನ್ನು ಶೇರ್ ಮಾಡಿ

Couple-naked

ಜೈಪುರ, ಏ.20-ಮನೆಯವರ ಇಚ್ಚೆಗೆ ವಿರುದ್ಧವಾಗಿ ವಿವಾಹವಾಗಿದ್ದ ಯುವ ಜೋಡಿಯನ್ನು ಗ್ರಾಮಸ್ಥರು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಅತ್ಯಂತ ನೀಚ ಕೃತ್ಯ ರಾಜಸ್ತಾನದ ಬುಡಕಟ್ಟು ಜಿಲ್ಲೆ ಬಂಸ್ವಾರಾದ ಶಂಭುಪುರದಲ್ಲಿ ನಡೆದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೇಯ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದ ಯುವಕ ಕಚ್ರು ಎಂಬ 20 ವರ್ಷದ ಯುವಕ ಸಂಬಂಧದಲ್ಲಿ ಸಹೋದರಿಯಾದ 18 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಗ್ರಾಮವು ಒಪ್ಪಿಕೊಳ್ಳದ ಈ ಸಂಬಂಧಕ್ಕೆ ಎರಡೂ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಜೋಡಿ ಮಾ.22ರಂದು ಗುಜರಾತ್‍ಗೆ ಪರಾರಿಯಾಗಿ ಅಲ್ಲಿ ಮದುವೆಯಾಗಿದ್ದರು.ಈ ನವದಂಪತಿ ಗುಜರಾತ್‍ನಲ್ಲಿರುವ ಸುಳಿವು ತಿಳಿದ ಗ್ರಾಮಸ್ಥರು ಅಲ್ಲಿಗೆ ತೆರಳಿ ಇಬ್ಬರನ್ನು ಗ್ರಾಮಕ್ಕೆ ಕರೆತಂದು ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ಹಳ್ಳಿಯಲ್ಲಿ ಮೆರವಣಿಗೆ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಗ್ರಾಮಕ್ಕೆ ತೆರಳಿದ ಕಲಿಂಜ್ರಾ ಠಾಣೆ ಪೊಲೀಸರು ಐವರನ್ನು ಬಂಧಿಸಿದರು. ಮಾರಣಾಂತಿಕ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಕಚ್ರುವನ್ನು ಬಂಸ್ವಾರಾದ ಸರ್ಕಾರಿ ಅಸ್ಪತ್ರೆಗೆ ಸೇರಿಸಲಾಗಿದೆ. ಥಳಿತಕ್ಕೆ ಒಳಗಾದ ಯುವತಿಗೆ ಚಿಕಿತ್ಸೆ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin