ಮನೆಯಿಂದ ಹೊರ ಹೋದ ಯುವಕ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

beluru--missing--boy

ಬೇಲೂರು, ಆ.12- ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರ ಹೋದ ಯುವಕ .ಬೇಲೂರು ಪಟ್ಟಣದ ಹೊಸನಗರ ಬಡಾವಣೆಯ ದೇವರಾಜು ಅವರ ಮಗ ಸುರೇಶ್(20) ಮನೆಯಿಂದ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಇಲ್ಲಿವರೆಗೂ ಮನೆಗೆ ಬಂದಿಲ್ಲ. ಸಂಬಂಧಿಇಕರ ಮನೆ ಹಾಗೂ ಪರಿಚಯಸ್ಥರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈತ ಕನ್ನಡ ಮತ್ತು ತಮಿಳು ಮಾತನಾಡುತ್ತಾನೆ.

 

ಐದುವರೆ ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ತೆಳುವಾದ ಶರೀರವನ್ನು ಹೊಂದಿದ್ದಾನೆ. ಮನೆಯಿಂದ ಹೋಗುವಾಗ ಬಿಸ್ಕೇಟ್ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಈ ಹುಡುಗನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೇಲೂರು ವೃತ್ತ ನಿರೀಕ್ಷಕರಿಗಾಗಲಿ ಅಥವಾ ಬೇಲೂರು ಪೊಲೀಸ್  ಠಾಣೆಗಾಗಲಿ ತಿಳಿಸುವಂತೆ ಕೋರಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin