ಮನೆಯ ಬಾಗಿಲು ಮೀಟಿ ಚಿನ್ನಾಭರಣ ಲೂಟಿ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಜ.4- ಟೈಟಾನ್ ಷೋರೂಂ ಮಾಲೀಕ ನಾಗೆಂದ್ರರವರ ಮನೆಯ ಬಾಗಿಲು ಮೀಟಿ 138 ಗ್ರಾಂ ಚಿನ್ನ 65 ಸಾವಿರ ನಗದು ಕಳವು ಮಾಡಲಾಗಿದೆ.ನಗರದ ಜೆ.ಸಿ.ರಸ್ತೆಯಲ್ಲಿ ಟೈಟಾನ್ ಷೋರೂಂ ನಡೆಸುತ್ತಿರುವ ನಾಗೇಂದ್ರರವರ ಮನೆಗೆ ಮಟಮಟ ಮಧ್ಯಾಹ್ನ ಬಾಗಿಲನ್ನು ಹಾರೆಯಿಂದ ಮೀಟಿ ಬಾಗಿಲು ತೆರೆದಿರುವ ಕಳ್ಳರು ಬೀರುವಿನಲ್ಲಿದ್ದ 138 ಗ್ರಾಂ ಸುಮಾರು 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ 65 ಸಾವಿರ ನಗದನ್ನು ದೋಚಿದ್ದಾರೆ.ಸ್ಥಳಕ್ಕೆ ಪೊಲೀಸ್ ಶ್ವಾನ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು ಈ ಪ್ರಕರಣದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin