ಮನೆಯ ಹೊರಗೆ ಮಲಗಿದ್ದ ವ್ಯಕ್ತಿ ಚಿರತೆಗೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

kolar
ಕೋಲಾರ,ಜು.2-ಮನೆಯ ಹೊರಗೆ ಮಲಗಿದ್ದ ವ್ಯಕ್ತಿಯೊಬ್ಬ ಚಿರತೆಗೆ ಬಲಿಯಾಗಿರುವ ಘಟನೆ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೀರಪುರ ಬಂಡೂರು ಅಗ್ರಹಾರದ ನಿವಾಸಿ ವೆಂಕಟೇಶಪ್ಪ(45) ನಿನ್ನೆ ರಾತ್ರಿ ಮನೆಯ ಹೊರಗೆ ಮಲಗಿದ್ದರು. ಈ ವೇಳೆ ಚಿರತೆಯೊಂದು ಆತನ ಮೇಲೆ ದಾಳಿ ನಡೆಸಿ ಆತನನ್ನು ಎಳೆದೊಯ್ದಿದೆ.  ವೆಂಕಟೇಶಪ್ಪನನ್ನು ತಿಂದು ಉಳಿದ ದೇಹವನ್ನು ಕೆಂಪ್ಪಪ್ಪನಪಳ್ಳಿಯಲ್ಲಿ ಬಿಟ್ಟು ಹೋಗಿದೆ. ಇಂದು ಬೆಳಗ್ಗೆ ಸಾರ್ವಜನಿಕರು ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.   ಚಿರತೆಯು ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದು, ಇದಕ್ಕೆ ವೆಂಕಟೇಶಪ್ಪ ಬಲಿಯಾಗಿದ್ದಾನೆ. ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು , ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin