ಮನೆ ಬಾಗಿಲಲ್ಲೇ ಕಾನೂನು ನೆರವು ನೀಡಿ ನ್ಯಾಯ ಒದಗಿಸಲು ಕೇಂದ್ರದ ಹೊಸ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Ravishankar-Prasad---01

ನವದೆಹಲಿ, ಮೇ 1-ಜನರಿಗೆ ಮನೆ ಬಾಗಿಲಲ್ಲೆ ಕಾನೂನು ನೆರವು ನೀಡಿ ನ್ಯಾಯ ಒದಗಿಸುವ ಕಾರ್ಯವನ್ನು 50,000ಕ್ಕೂ ಹೆಚ್ಚು ಅರೆ ಕಾನೂನು ಸ್ವಯಂ ಸೇವಕರು ನಿರ್ವಹಿಸಲಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ರಾಜಧಾನಿಯಲ್ಲಿ ಎರಡು ದಿನಗಳ ಅರೆ ಕಾನೂನು ಸ್ವಯಂಸೇವಕರ (ಪ್ಯಾರಾ ಲೀಗಲ್ ವಾಲಂಟಿಯರ್ಸ್-ಪಿಎಲ್‍ವಿ) ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಈ ವಿಷಯ ತಿಳಿಸಿದರು.   ಸರ್ವರಿಗೂ ನ್ಯಾಯವನ್ನು ಸುಲಭವಾಗಿ ಒದಗಿಸುವುದು ಹಾಗೂ ನ್ಯಾಯದಲ್ಲಿ ನಂಬಿಕೆ ಮೂಡಿಸುವುದು ಪ್ರಜಾಪ್ರಭುತ್ವದ ಯಶಸ್ಸಿಗೆ ಅತ್ಯಗತ್ಯವಾಗಿದೆ. ತಂತ್ರಜ್ಞಾನ ಸಮರ್ಪಕ ಬಳಕೆಯಿಂದ ಬಡವರು ಮತ್ತು ಅಗತ್ಯವಿದ್ದವರಿಗೆ ಕಾನೂನು ನೆರವು ನೀಡಲು ಸಾಧ್ಯ. ಅಲ್ಲದೇ ಜನಹಿತ ಯೋಜನೆಗಳಲ್ಲಿ ಆಗುತ್ತಿದ್ದ ಸೋರಿಕೆಯನ್ನು ತಡೆಗಟ್ಟಲು ಡಿಜಿಟಲ್ ತಂತ್ರಜ್ಞಾನ ನೆರವಾಗಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ದೀಪಕ್ ಮಿಶ್ರಾ ಮಾತನಾಡಿ, ಅಗತ್ಯವಿದ್ದವರಿಗೆ ಉಚಿತ ಕಾನೂನು ನೀಡುವ ಉದ್ದೇಶದಿಂದ ವಕೀಲರನ್ನು ನೇಮಿಸಿರುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin