ಮನೆ ಬೀಗ ಮೀಟಿ ಹಣ, ಆಭರಣ ಲೂಟಿ

ಈ ಸುದ್ದಿಯನ್ನು ಶೇರ್ ಮಾಡಿ

house-theft

ಮೈಸೂರು, ಏ.15- ಮನೆಯೊಂದರ ಬೀಗ ಮೀಟಿ ಒಳನುಗ್ಗಿದ ಚೋರರು ಬೀರುವನ್ನು ಒಡೆದು 3.5 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳು, ಬೆಳ್ಳಿ ವಸ್ತುಗಳು ಸೇರಿದಂತೆ ನಗದನ್ನು ದೋಚಿರುವ ಘಟನೆ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ರಾಜೀವ್‍ನಗರದ 2ನೇ ಹಂತದ ನಿವಾಸಿ ಇಮ್ರಾನ್ ಎಂಬುವರು ಏ.8ರಂದು ಕುಟುಂಬ ಸಮೇತ ಧಾರವಾಡಕ್ಕೆ ತೆರಳಿದ್ದರು. ಈ ವೇಳೆ ಕಳ್ಳರು ಇವರ ಮನೆಯ ಬಾಗಿಲು ಮೀಟಿ ಒಳನುಗ್ಗು ಬೀರುವನ್ನು ಒಡೆದಿದ್ದಾರೆ. ಅದರಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ ಹಣ, ಆಭರಣ, ಬೆಳ್ಳಿವಸ್ತುಗಳನ್ನು ಕದ್ದೊಯ್ದಿದ್ದಾರೆ.ಏ.9ರಂದು ಇವರ ಮನೆಯ ಬಾಗಿಲು ತೆರೆದುಕೊಂಡಿರುವುದನ್ನು ಪಕ್ಕದ ಮನೆಯವರು ಗಮನಿಸಿ ತಕ್ಷಣ ಇಮ್ರಾನ್ ಅವರಿಗೆ ವಿಷಯ ತಿಳಿಸಿ ಪೊಲೀಸರಿಗೂ ಹೇಳಿದ್ದಾರೆ.ಸ್ಥಳಕ್ಕಾಗಮಿಸಿದ ಉದಯಗಿರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಧಾರವಾಡದಿಂದ ಇಮ್ರಾನ್ ಕುಟುಂಬ ಮನೆಗೆ ಮರಳಿ ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin