ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಿಂದಾಗಿ ಶಾಲಾ ಮಕ್ಕಳಿಗೆ ‘ರಜೆ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು (ಮಹದೇವಪುರ), ಸೆ.23- ಕಾಂಗ್ರೆಸ್ ಪಕ್ಷದ ವತಿಯಿಂದ ಇಲ್ಲಿನ ರಾಮಗೊಂಡನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಗೆ ಅಡ್ಡವಾಗಿ ದೊಡ್ಡ ದೊಡ್ಡ ಫ್ಲಕ್ಸ್‍ಗಳನ್ನು ಹಾಕಿದ್ದರಿಂದ ಹಾಗೂ ಶಾಲೆಯ ಮುಂಭಾಗವೇ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರಿಂದ ಶಾಲೆಗೆ ಬಂದ ಮಕ್ಕಳು ಹೊರಗೆ ಕಾದು ಕುಳಿತಿದ್ದುದು ಕಂಡುಬಂತು.

ಮನೆ ಮನೆಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ನೂರಾರು ಮಕ್ಕಳು ಶಾಲೆಯ ಹೊರಗಡೆಯೇ ಕುಳಿತಿದ್ದರು. ಅತ್ತ ಕಾರ್ಯಕ್ರಮದ ರಗಳೆಯಿಂದ ಶಾಲೆ ಪ್ರಾರಂಭವಾಗಿರಲಿಲ್ಲ. ಕಾಂಗ್ರೆಸ್ ಪಕ್ಷದವರು ಮನೆ ಮನೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಜೆ ಘೋಷಿಸಿದ್ದರಿಂದ ಇತ್ತ ಶಾಲೆ ನಡೆಯದೆ ಮಕ್ಕಳು ಮನೆಗೆ ತೆರಳುತ್ತಿದ್ದರು.

Facebook Comments

Sri Raghav

Admin