ಮನೆ ಮನೆಗೆ `ಕಾವೇರಿ’

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಕನ್ನಡಿಗರ ಮನೆ ಮಾತಾಗಿರುವ ಉದಯ ವಾಹಿನಿಯಲ್ಲಿ ಮತ್ತೊಂದು ಮೆಘಾ ಧಾರಾವಾಹಿ ಹೊರ ಬರುತ್ತಿದೆ. ಅದು ಕನ್ನಡಿಗರ ಮನ ಮಿಡಿಯುವಂತಹ ಕಥಾ ಹಂದರವಾಗಿದ್ದು, ಕಾವೇರಿ ಯಾಗಿ ಕಿರು ಪರದೆಯ ಮೇಲೆ ಬರುತ್ತಿದೆ.  ಇದೇ ಜೂನ್ 26 ರಿಂದ ಸೋಮವಾರ ದಿಂದ ಶುಕ್ರವಾರ ದವರೆಗೆ ರಾತ್ರಿ 8ಕ್ಕೆ ತ್ಯಾಗಮಯಿ, ಸ್ನೇಹಮಯಿ ಹುಡುಗಿಯ ಕಥೆ ನೋಡಬಹುದಾಗಿದೆ. ಕಾವೇರಿಯ ಪಾತ್ರದಲ್ಲಿ ನಟಿ ಪ್ರಿನ್ಸಿ ಕೃಷ್ಣನ್ ನಟಿಸಿದರೆ ನಾಯಕನಾಗಿ ಶ್ರೀಧರ್ ನಟಿಸುತ್ತಿ ದ್ದಾರೆ. ಪ್ರಧಾನ ಪಾತ್ರದಲ್ಲಿ ಜನಪ್ರಿಯ ನಟರಾದ ಅಶ್ವಿನಿ ಗೌಡ, ಸುರೇಶ್ ರೈ, ಶ್ರೀಕಾಂತ ಹೆಬ್ಳಿಕರ್ ನಟಿಸುತ್ತಿದ್ದಾರೆ. ಕಾವೇರಿ ನ್ಯೂ ಡಿ-ಟು ಮಿಡಿಯಾ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ನಿರ್ದೇಶನದ ಜವಾಬ್ದಾರಿಯನ್ನು ವಿನೋದ ಫೀಲ್ಸ್ ವಹಿಸಿಕೊಂಡಿದ್ದಾರೆ.

ಕಾವೇರಿ ಕೇವಲ ಪಾತ್ರವಲ್ಲದೇ ಅದು ಸಮಸ್ತ ಹೆಣ್ತನದ ರಾಯಭಾರಿ ಎನ್ನುವುದು ನಿರ್ದೇಶಕ ವಿನೋದ ಮಾತು.  ಇದೇ ಸಂದರ್ಭದಲ್ಲಿ ಕಾವೇರಿ ಧಾರಾವಾಹಿಯನ್ನು ನೋಡಿ ಚಿನ್ನ ಗೆಲ್ಲಿ ಎಂಬುದರ ಮೂಲಕ ಉದಯ ವೀಕ್ಷಕರಿಗೆ ಚಿನ್ನದ ಸುರಿಮಳೆ ಹರಿಸಲಿದೆ. ಜೂನ್26 ರಿಂದ ಜೂಲೈ 07ರವರೆಗೆ ಧಾರಾವಾಹಿಯಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿದ ವಿನ್ನರ್‍ಗಳಿಗೆ 100ಗ್ರಾಮದವರೆಗೆ ಬಂಗಾರವನ್ನು ಗೆಲ್ಲುವ ಅವಕಾಶವಿದೆಯಂತೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin