ಮನೆ ಮನೆಗೆ ದಿನಪತ್ರಿಕೆ ಹಂಚುವ ಮೂಲಕ ರಾಜ್ಯೋತ್ಸವ ಆಚರಣೆ : ವೈ.ಎಸ್.ವಿ. ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

datta--kuduru
ಕಡೂರು, ಅ.20- ಕಳೆದ ವರ್ಷ ರಾಜ್ಯೋತ್ಸವವನ್ನು ಬಸ್ ಹಾಗೂ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಕನ್ನಡ ಪುಸ್ತಕಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ರಾಜ್ಯೋತ್ಸವದ ಆಚರಣೆ ಮಾಡಲಾಗಿತ್ತು. ಈ ಬಾರಿ ಮನೆ ಮನೆಗೆ ಕನ್ನಡ ದಿನ ಪತ್ರಿಕೆಗಳನ್ನು ಹಂಚುವ ಮೂಲಕ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ ನಡೆಸಲಾಗುವುದು ಎಂದು ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.ತಾಪಂ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಟಿಪ್ಪು ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, ಅಂದು ಬೆಳಿಗ್ಗೆ 9 ಗಂಟೆಗೆ ತಹಸೀಲ್ದಾರ್‍ರವರಿಂದ ಧ್ವಜಾರೋಹಣ ನೆರವೇರಿಸಿ 11 ಗಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಎಲ್ಲಾ ಅಧಿಕಾರಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ಕನ್ನಡ ದಿನಪತ್ರಿಕೆಗಳನ್ನು ಮನೆಗೆ ಹಾಕಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪಟ್ಟಣದ ಪ್ರತಿ ಮನೆಗಳಿಗೆ ತೆರಳಿ ದಿನಪತ್ರಿಕೆ ಹಂಚುವ ಮೂಲಕ ಕನ್ನಡ ಪತ್ರಿಕೆ ಓದುವ ಹವ್ಯಾಸ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಯಳ್ಳಂಬಳಸೆ ಗ್ರಾಮದಲ್ಲಿ ದಲಿತ ಕವಿ ಸಿದ್ಧಲಿಂಗಯ್ಯ ಅವರ ಉಪಸ್ಥಿತಿಯಲ್ಲಿ ದೇವತೆಗಳಿಗೆ ಯಾತ್ರಾ ಸಂದರ್ಭದಲ್ಲಿ ಅಸಾದಿ ಜಾನಪದ ಹಾಡುಗಳನ್ನು ಕೇಳಿಸುವ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುವುದು. ವಿಶೇಷ ಉಪನ್ಯಾಸಕರಿಂದ ಟಿಪ್ಪು ಸಂದೇಶ ತಿಳಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ತಹಸೀಲ್ದಾರ್ ಭಾಗ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ, ಪುರಸಭಾ ಅಧ್ಯಕ್ಷ ಎಂ.ಮಾದಪ್ಪ, ಕಸಾಪ ಅಧ್ಯಕ್ಷ ರವಿಪ್ರಕಾಶ್, ಕರವೇ.ಜಿಲ್ಲಾಧ್ಯಕ್ಷ ರುದ್ರೇಗೌಡ, ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಲಕ್ಕಪ್ಪ, ಕೆ.ಎಂ.ಮಹೇಶ್ವರಪ್ಪ, ಸೂರಿ ಶ್ರೀನಿವಾಸ್, ಮುಸ್ಲಿಂ ಸಮಾಜದ ಅಧ್ಯಕ್ಷ ಹಬೀಬುಲ್ಲಾಖಾನ್, ಮುಖಂಡರಾದ ಎನ್.ಬಷೀರ್‍ಸಾಬ್, ಎನ್.ಇಮಾಮ್, ಇಕ್ಬಾಲ್, ತನ್ವೀರ್ ಅಹಮದ್ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin