ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

firing

ಮಳವಳ್ಳಿ, ಆ.25-ಮನೆ ಮುಂದೆ ನಿಂತಿದ್ದ ಕಾರೊಂದಕ್ಕೆ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ವಾಸಿ ಎಂ.ಬಸವರಾಜು ಎಂಬುವರಿಗೆ ಸೇರಿದ ಈ ಸ್ವಿಫ್ಟ್ ಡಿಸೇರ್ ಕಾರಿಗೆ ಕಳೆದ ರಾತ್ರಿ 11.30ರಲ್ಲಿ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮನೆಯೊಳಗಿದ್ದವರು ಹೊರಗೋಡಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ವಾಹನ ಸಂಪೂರ್ಣ ಸುಟ್ಟು ಹೋಗಿದೆ.

ಪರಿಣಾಮವಾಗಿ ಕಾರು ಬಹುತೇಕ ಸುಟ್ಟು ಕರಕಲಾಗಿದ್ದು ಈ ಅನಾಹುತದಲ್ಲಿ ಬಸವರಾಜು ಅವರಿಗೆ ಕರಕಲಾಗಿದ್ದು ಈ ಅನಾಹುತದಲ್ಲಿ ಬಸವರಾಜು ಅವರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ರೇಷ್ಮೆ ಕೃಷಿಯ ಜೊತೆಗೆ ಅಂಗಡಿ ವ್ಯಾಪಾರಿಯೂ ಆಗಿರುವ ಬಸವರಾಜು ಕಳೆದ ಮೂರು ವರ್ಷಗಳ ಹಿಂದೆ ಈ ಕಾರನ್ನು ಖರೀದಿಸಿದ್ದರು. ಸ್ಥಳಕ್ಕೆ ಧಾವಿಸಿರುವ ಹಲಗೂರು ಪಿಎಸ್‍ಐ ಕೃಷ್ಣಮೂರ್ತಿ, ಎಎಸ್‍ಐ ಶಿವಲಿಂಗಯ್ಯ ಘಟನೆಯ ಮಹಜರು ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin