ಮಮತಾ ಬ್ಯಾನರ್ಜಿ ಹತ್ಯೆಗೆ ಸುಪಾರಿ

ಈ ಸುದ್ದಿಯನ್ನು ಶೇರ್ ಮಾಡಿ

Mamata
ಕೊಲ್ಕತಾ, ಮೇ 12-ನನ್ನ ಹತ್ಯೆಗೆ ರಾಜಕೀಯ ಸಂಚು ನಡೆಯುತ್ತಿದೆ ಎಂದು ಹೇಳಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್(ಟಿಎಂಸಿ) ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ, ಇದಕ್ಕೆ ತಾವು ಅಂಜುವುದಿಲ್ಲ ಎಂದೂ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ನನ್ನನ್ನು ಕೊಲ್ಲಲು ಯತ್ನ ನಡೆಸಿವೆ. ಇದಕ್ಕಾಗಿ ಸುಪಾರಿಯನ್ನೂ ನೀಡಲಾಗಿದೆ. ಆ ಪಕ್ಷದ ಹೆಸರನ್ನು ನಾನು ಹೇಳುವುದಿಲ್ಲ. ಹಂತಕರು ಇದಕ್ಕಾಗಿ ಹೊಂಚು ಹಾಕುತ್ತಿದ್ದಾರೆ. ಈ ಬಗ್ಗೆ ನನಗೆ ಖಚಿತ ಮಾಹಿತಿ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಝೀ 24 ಗಂಟಾ ವಾರ್ತಾವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಯಾರು ಮುನ್ನಡೆಸಬೇಕೆಂಬ ಬಗ್ಗೆ ತಾನು ಈಗಾಗಲೇ ರಾಜಕೀಯ ಉಯಿಲು( ಪೊಲಿಟಿಕಲ್ ವಿಲ್) ಬರೆದಿಟ್ಟಿರುವುದಾಗಿಯೂ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

Facebook Comments

Sri Raghav

Admin