ಮರಕ್ಕಪ್ಪಳಿಸಿದ BMW ಕಾರು, ರೇಸ್ ಚಾಂಪಿಯನ್ ಅಶ್ವಿನ್ ಹಾಗೂ ಪತ್ನಿ ಸಜೀವ ದಹನ (Video)

ಈ ಸುದ್ದಿಯನ್ನು ಶೇರ್ ಮಾಡಿ

Car-Racer--01

ಚೆನ್ನೈ, ಮಾ.18-ಚೆನ್ನೈನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಅಂತಾರಾಷ್ಟ್ರೀಯ ಕಾರ್ ರೇಸ್ ರೇಸರ್ ಅಶ್ವಿನ್ ಸುಂದರ ಮತ್ತು ಅವರ ಪತ್ನಿ ನಿವೇದಿತಾ ಸಜೀವ ದಹನಗೊಂಡಿದ್ದಾರೆ.  ಅಶ್ವಿನ್ ದಂಪತಿ ತೆರಳುತ್ತಿದ್ದ ದುಬಾರಿ ಬಿಎಂಡಬ್ಲ್ಯು ಕಾರು ಮರಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತ್ತು. ಈ ದುರ್ಘಟನೆಯಲ್ಲಿ 32 ವರ್ಷದ ಅಶ್ವಿನ್ ಮತ್ತು ಅವರ ಪತ್ನಿ ನಿವೇದಿತಾ ದುರಂತ ಸಾವಿಗೀಡಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಶ್ವಿನ್ 2012 ಮತ್ತು 2013ರಲ್ಲಿ ಎಫ್-4 ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಅಶ್ವಿನ್ ಅವರ ಕಾರು ಮರಕ್ಕೆ ಅಪ್ಪಳಿ ಬೆಂಕಿ ಹೊತ್ತಿಕೊಂಡಿತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ಮುನ್ನ ದಂಪತಿ ಮೃತಪಟ್ಟಿದ್ದರು. ಕಾರು ಧಗಧಗನೆ ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್-ಲೋಡ್ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

 

Car-Racer--02

Car-Racer--03

Car-Racer--04

Facebook Comments

Sri Raghav

Admin