ಮರಕ್ಕೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ಕೂಲಿ ಕಾರ್ಮಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--Maluru--01

ಮಾಲೂರು, ಆ.12- ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ಕೋಲಾರ ರಸ್ತೆ ದೊಡ್ಡಕಾಡಕೂರು ಗೇಟ್ ಬಳಿ ಇಂದು ಮುಂಜಾನೆ ಸಂಭವಿಸಿದೆ.  ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವನನ್ನು ಮಾಲೂರು ಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಕಾರ್ಮಿಕರನ್ನು ಮಾಲೂರಿನವರೇ ಆದ ನಾಗರಾಜ್ (34), ರಮೇಶ್ (35) ಎಂದು ಗುರುತಿಸಲಾಗಿದೆ. ರೈತರೊಬ್ಬರ ತೋಟಕ್ಕೆ ತರಕಾರಿ ಲೋಡ್ ತುಂಬಿಕೊಂಡು ಬರಲು ಪಟ್ಟಣದಿಂದ ಲಾರಿ ಹೋಗುತ್ತಿತ್ತು. ಬೆಳಗ್ಗೆ 5.30ರ ಸಂದರ್ಭ ಲಾರಿ ದೊಡ್ಡಕಾಡಕೂರು ಗೇಟ್ ಬಳಿ ಬಂದಾಗ ಎದುರಿನಿಂದ ಇನ್ನೊಂದು ಲಾರಿ ಬರುತ್ತಿತ್ತು. ಪರಸ್ಪರ ಡಿಕ್ಕಿಯಾಗುವ ಸಂದರ್ಭ ಅದನ್ನು ತಪ್ಪಿಸಲು ಚಾಲಕ ಲಾರಿಯನ್ನು ಒಂದು ಬದಿಗೆ ತಿರುಗಿಸಿದ್ದಾನೆ.

ವೇಗದಲ್ಲಿದ್ದ ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಾಗರಾಜ್ ಮತ್ತು ರಮೇಶ್ ಅವರ ತಲೆಗಳಿಗೆ ಪೆಟ್ಟುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಲೂರು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಂತರ ಮರಕ್ಕೆ ಡಿಕ್ಕಿಯಾದ ಲಾರಿಯನ್ನು ಅಲ್ಲಿಂದ ತೆಗೆಯಲು ಪೊಲೀಸರು ಸುಮಾರು 2 ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು. ಈ ಸಂದರ್ಭ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

Facebook Comments

Sri Raghav

Admin