ಮರಗಳನ್ನು ಬೆಳೆಸಿ ಲಾಭ ಪಡೆಯಿರಿ : ರುದ್ರಮುನಿ

ಈ ಸುದ್ದಿಯನ್ನು ಶೇರ್ ಮಾಡಿ

23

ಬಾಗಲಕೋಟೆ,ಏ.9- ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಯಡಿಯಲ್ಲಿ ರೈತರು ಮರಗಳನ್ನು ಬೆಳೆಸಿ ಪರ್ಯಾವರಣದ ಸಂರಕ್ಷೆಣೆಗೆ ಸಹಯೋಗ ಕೊಡುವುದರೊಂದಿಗೆ ಆರ್ಥಿಕವಾಗಿಯೂ ಲಾಭ ಪಡೆಯಬೇಕು ಎಂದು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ವಿ. ರುದ್ರಮುನಿ ಗೌಡರ ಕರೆ ನೀಡಿದರು.
ಕೃಷಿಕರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ರೈತರು ಉದ್ಯೋಗ ಖಾತ್ರಿ ಹಾಗೂ ಕೃಷಿ ಅರಣ್ಯ ಪ್ರೋ ಯೋಜನೆಗಳಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಅರಣ್ಯ ಮರಗಳನ್ನು ನೆಟ್ಟು ಬೆಳೆಸಲು ಇಲಾಖೆ ಸಸಿಗಳಿಂದ ಪೂರೈಕೆಯೊಂದಿಗೆ ಅನುದಾನ ಸಿಗುತ್ತದೆ. ಸಾಗವಾನಿಯಂತಹ ದೀರ್ಘಾವಧಿ ಮರಗಳ ಜೊತೆಗೆ ಕಡಿಮೆ ಅವಧಿಯಲ್ಲಿ ಬೆಳೆಯುವ ಹೆಬ್ಬೇವು, ನುಗ್ಗೆ, ಲಿಂಬೆ, ಬೇವು ಮುಂತಾದ ಮರಗಳನ್ನು ಬೆಳೆಸಿ ಎಂದು ಸಲಹೆ ನೀಡಿದರು.

ಪರಿಸರ ಸಂರಕ್ಷಣೆಯಲ್ಲಿ ರೈತರು ಪಾಲ್ಗೊಂಡರೆ ವಾತಾವರಣ ವೈಪರೀತ್ಯ ತಪ್ಪಿಸಬಹುದು. ಈ ತರಬೇತಿಯಲ್ಲಿ ಅರಿತ ವಿಷಯಗಳನ್ನು ಅಳವಡಿಸಿಕೊಂಡು ತಮ್ಮ ಕುರಿ ಮತ್ತು ಮೇಕೆ ಸಾಕಾಣಿಕೆ ಉದ್ಯೋಗವನ್ನು ಉತ್ತಮ ರೀತಿಯಿಂದ ಮಾಡಿ ಸ್ವಾವಲಂಭಿಗಳಾಗಿರಿ ಎಂದು ಅವರು ಹಾರೈಸಿದರು.ಈ ಮೂರು ದಿನಗಳ ತರಬೇತಿಯಲ್ಲಿ ಪಶು ವೈದ್ಯಾಧಿಕಾರಿ ಡಾ. ಎಸ್.ಪಿ. ಬೇನಾಳ, ಡಾ. ಎಸ್.ಎಂ. ಗುಡದಿನ್ನಿ, ಡಾ. ಆರ್.ವಿ. ಜಗಾಪುರ, ಡಾ. ವೆಂಕಟೇಶ ಸಂಕರಿ, ಡಾ. ಶಂಕರಗೌಡ ಮುದಿಗೌಡರ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವ್ಶೆಜ್ಞಾನಿಕ ವಿವರಗಳೊಂದಿಗೆ ತರಬೇತಿ ನೀಡಿದರು.
ವಿವಿಧ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳ ಪರವಾಗಿ ಶ್ರೀನಿವಾಸ ಭಜಂತ್ರಿ, ಮಂಜುನಾಥ ಎತ್ತಿನಮನಿ, ಲಕ್ಷ್ಮಿಬಾಯಿ ಭಜಂತ್ರಿ, ರಾಜಕುಮಾರ, ಸಿದ್ದಪ್ಪ ನಡಹಟ್ಟಿ ಮುಂತಾದವರು ಮಾತನಾಡಿ ಈ ತರಬೇತಿ ಅತ್ಯಂತ ಉಪಯುಕ್ತವಾಗಿತ್ತು ಹಾಗೂ ನಾವು ಕುರಿ ಮೇಕೆ ಸಾಕಾಣಿಕೆಗೆ ಪ್ರೋ ದಾಯಕವಾಗಿತ್ತೆಂದು ನುಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin