ಮರಗಳ್ಳತನ ಮಾಡಲು ಬಂದು ಪ್ರಾಣ ಕಳೆದುಕೊಂ..!

ಈ ಸುದ್ದಿಯನ್ನು ಶೇರ್ ಮಾಡಿ

Tree--01

ಚಿಂತಾಮಣಿ, ಸೆ.25- ಮರ ಕತ್ತರಿಸುವಾಗ ಅದೇ ಮರ ವ್ಯಕ್ತಿಯ ಮೇಲೆ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಹಳ್ಳಿ ಕೆರೆ ಅಂಗಳದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮುಸ್ತೂರು ಪಟ್ಟಣದ ನಿವಾಸಿ ಈರಪ್ಪ (45) ಮೃತಪಟ್ಟ ವ್ಯಕ್ತಿ.
ಈತ ತನ್ನ ಐವರು ಸ್ನೇಹಿತರ ಜತೆ ಮರಗಳ್ಳತನಕ್ಕೆ ಬಂದಿದ್ದ ಎನ್ನಲಾಗಿದೆ. ಇದೇ ವೇಳೆ ಮರ ಕುಯ್ಯುತ್ತಿರುವಾಗ ಈರಪ್ಪನ ಮೇಲೆ ಆಯ ತಪ್ಪಿ ಬಿದ್ದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನು ನೋಡಿ ಜತೆಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ವಿಷಯ ಘಟನೆ ಬೆಳಕಿಗೆ ಬಂದಿದ್ದು , ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin

One thought on “ಮರಗಳ್ಳತನ ಮಾಡಲು ಬಂದು ಪ್ರಾಣ ಕಳೆದುಕೊಂ..!

Comments are closed.