ಮರಗಳ ಮಾರಣಹೋಮದ ವಿರುದ್ಧ ಪ್ರತಿಭಟಿಸಿದ ಯುವತಿಯ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Girl-Burn-Alive

ಜೋಧ್‍ಪುರ್(ರಾಜಸ್ತಾನ), ಮಾ.27– ಮರಗಳ ಮಾರಣಹೋಮದ ವಿರುದ್ಧ ಪ್ರತಿಭಟನೆ ನಡೆಸಿದ 20 ವರ್ಷದ ಯುವತಿಯನ್ನು ದುಷ್ಕರ್ಮಿಗಳ ಗುಂಪೊಂದು ಬೆಂಕಿ ಹಚ್ಚಿ ಕೊಂದಿರುವ ಭೀಕರ ಘಟನೆ ರಾಜಸ್ತಾನದ ಜೋಧ್‍ಪುರ್ ಬಳಿ ಗ್ರಾಮವೊಂದರಲ್ಲಿ ನಡೆದಿದೆ. ಈ ಕೃತ್ಯದಲ್ಲಿ ಗ್ರಾಮ ಮುಖ್ಯಸ್ಥ ಕೂಡ ಶಾಮೀಲಾಗಿದ್ದು, ಗ್ರಾಮದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.  ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ತನ್ನ ತೋಟದಲ್ಲಿದ್ದ ಮರಗಳನ್ನು ಕತ್ತರಿಸುವುದಕ್ಕೆ ಲಲಿತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕುಪಿತರಾದ ಅದೇ ಗ್ರಾಮದ ದುಷ್ಕರ್ಮಿಗಳ ಗುಂಪೊಂದು ಆಕೆಯ ಮೈಮೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ತೀವ್ರ ಸುಟ್ಟಗಾಯಗಳಾದ ಲಲಿತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಈ ಗುಂಪಿನಲ್ಲಿ ಸರ್‍ಪಂಚ್ (ಗ್ರಾಮ ಮುಖ್ಯಸ್ಥ) ರಣವೀರ್ ಸಿಂಗ್ ಸಹ ಶಾಮೀಲಾಗಿರುವ ಆರೋಪಗಳಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 10 ಜನರ ವಿರುದ್ಧ ಎಫ್‍ಐಅರ್ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin