ಮರಗಿಡ ಕಡಿದರೆ ಅಕ್ಷಮ್ಯ ಅಪರಾಧ

ಈ ಸುದ್ದಿಯನ್ನು ಶೇರ್ ಮಾಡಿ

GOWRIBIDANURU

ಗೌರಿಬಿದನೂರು,ಆ.31- ಗಿಡಮರಗಳು ಪ್ರಕೃತಿದತ್ತವಾಗಿ ನಮಗೆ ಒಲಿದಿದ್ದು ಅದನ್ನು ಕಡಿದರೆ ಅಕ್ಷಮ್ಯಅಪರಾದ ಹಾಗೂ ಶಿಕ್ಷಾರ್ಹ ಎಂದುಜಿಲ್ಲಾ ನ್ಯಾಯಾದೀಶ ಹಾಗೂ ಜಿಲ್ಲಾ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ನಟರಾಜು ಅಭಿಪ್ರಾಯಪಟ್ಟರು.ತಾಲೂಕಿನ ಡಿ ಪಾಳ್ಯ ಹೋಬಳಿಯ ನಾಮಗೊಂಡ್ಲು ಬಳಿಯ ಚಿಕ್ಕಕೆರೆ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದ್ದ ನೀರು ಶುದ್ದೀಕರಣ ಹಾಗೂ ಶೇಖರಣೆ, ಹಾಗೂ ಪರಿಸರ ಉಳಿಸುವ ಬಗ್ಗೆ ಕಾನೂನು ಅರಿವುಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವು ಕಿಡಿಗೇಡಿಗಳು ಯಂತ್ರ ಬಳಸಿ ಬೃಹತ್ ಮರಗಳನ್ನು ಕಡಿದಿದ್ದುಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ ನ್ಯಾಯಾದೀಶರುಇದಕ್ಕೆ ಸಂಬಂದಿಸಿದ ಅರಣ್ಯ ಅಧಿಕಾರಿಗಳು ಹಾಗೂ ಗ್ರಾ ಪಂ ಅಧಿಕಾರಿಗಳಿಗೆ ಕೂಡಲೇ ನೋಟೀಸ್ ನೀಡಿಕಾರಣ ನೀಡಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು. ಹಿರಿಯ ಶ್ರೇಣಿ ನ್ಯಾಯಾಧೀಶೆ ಅನಿತಾ. ಜಿ ಮಾತನಾಡಿದರು. ಹೆಚ್ಚುವರಿ ನ್ಯಾಯಾದೀಶ ಸಂದೀಪ್ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ವಿ.ಸಿ.ಗಂಗಯ್ಯ ಪರಿಸರವಾದಿ ಹಾಗೂ ವಕೀಲರಾದ ಎಂ.ಆರ್. ಲಕ್ಷ್ಮೀನಾರಾಯಣ ರೈತ ಮುಖಂಡರಾದ ಲೋಕೇಶ್ ಮುದ್ದರಂಗಪ್ಪ, ಹಿರೇಬಿದನೂರು ರಾಜಣ್ಣ, ವಕೀಲರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin