ಮರದ ಕುರ್ಚಿಯಿಂದ ಹೊಡೆದು ಐಜಿಸಿಎಆರ್ ಸಂಸ್ಥೆಯ ನಿವೃತ್ತ ವಿಜ್ಞಾನಿಯ ಭೀಕರ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

murder
ಚೆನ್ನೈ, ನ.15-
ಕಲ್ಪಕಂನ ಇಂದಿರಾಗಾಂಧಿ ಸೆಂಟರ್ ಫಾರ್ ಆಟಾಮಿಕ್ ರಿಸರ್ಚ್ (ಐಜಿಸಿಎಆರ್) ಸಂಸ್ಥೆಯ ನಿವೃತ್ತ ವಿಜ್ಞಾನಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಸದ್ರಾಸ್‍ನಲ್ಲಿ ನಿನ್ನೆ ನಡೆದಿದೆ.ಹಿಂದೂಸ್ತಾನ್ ಯೂನಿವರ್ಸಿಟಿಯಲ್ಲಿ ಕಳೆದ ಒಂದುವರೆಗೆ ವರ್ಷದಿಂದ ಅತಿಥಿ ಉಪನ್ಯಾಸಕರಾಗಿದ್ದ ಬಾಬು ರಾವ್ (61) ಕೊಲೆಗೀಡಾದ ನಿವೃತ್ತ ವಿಜ್ಞಾನಿ . ಮನೆಯಲ್ಲಿ ಒಬ್ಬರೇ ಇದ್ದ ಅವರನ್ನು ಮರದ ಕುರ್ಚಿಯಿಂದ ಭೀಕರವಾಗಿ ಹೊಡೆದು ಕೊಲ್ಲಲಾಗಿದೆ. ಅವರ ನಿವಾಸದಿಂದ ಯಾವುದೇ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರ ಪತ್ನಿ ರಾಜಲಕ್ಷ್ಮಿ ಅವರು ಮದುವೆ ಸಮಾರಂಭಕ್ಕಾಗಿ ಆಂಧ್ರಪ್ರದೇಶಕ್ಕೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. ರಾವ್ ಅವರ ಪುತ್ರ ವಿಶ್ವ ಚೈತನ್ಯ ಸ್ವೀಡನ್‍ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ.
ಮನೆಯಲ್ಲಿ ದುರಸ್ತಿ ಕೆಲಸ ಮಾಡಲು ನಿನ್ನೆ ಬೆಳಿಗ್ಗೆ 9.30ರಲ್ಲಿ ಬಾಬು ರಾವ್ ಅವರ ನಿವಾಸಕ್ಕೆ ಕಲ್ಪಕಂನ ಪುದುಪಟ್ಟಿಣಂನಿಂದ ಬಷೀರ್ ಮತ್ತು ಸತೀಶ್ ಕುಮಾರ್ ಎಂಬ ಸ್ಟೀಲ್ ಫ್ಯಾಬ್ರಿಕೇಷನ್ ನೌಕರರು ಬಂದು ಕೂಗಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಅವರು ಮನೆಯ ಹಿಂಬದಿಗೆ ಹೋಗಿ ನೋಡಿದಾಗ ಬಾಗಿಲು ತೆರೆದಿತ್ತು. ಒಳಗೆ ಇಣುಕಿದಾಗ ರಕ್ತದ ಮಡುವಿನಲ್ಲಿದ್ದ ರಾವ್ ಶವ ಪತ್ತೆಯಾಯಿತು.
ತಕ್ಷಣ ಅವರು ಪೆÇಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿದಾಗ ಮರದ ಕುರ್ಚಿಯಿಂದ ಅವರ ತಲೆ, ಹಣೆ ಮತ್ತು ಕಿವಿ ಭಾಗಗಳಿಗೆ ಬಲವಾಗಿ ಹೊಡೆದಿರುವುದು ಪತ್ತೆಯಾಯಿತು. ರಾವ್‍ರನ್ನು ಹತ್ಯೆ ಮಾಡಿದ ನಂತರ ಹಂತಕರು ಮುರಿದ ಕುರ್ಚಿಯನ್ನು ಅವರ ಮೇಲೆ ಎಸೆದು ಪರಾರಿಯಾಗಿದ್ದಾರೆ. ಹಂತಕರು ಬಲವಂತದಿಂದ ಮನೆಯೊಳಗೆ ಪ್ರವೇಶಿಸಿರುವ ಕುರುಹು ಇಲ್ಲ. ಹೀಗಾಗಿ ಪರಿಚಿತರೇ ಕೊಲೆ ಮಾಡಿರುವ ಶಂಕೆ ಇದೆ. ಮನೆಯಲ್ಲಿದ್ದ ಯಾವುದೇ ಬೆಲೆಬಾಳುವ ವಸ್ತುಗಳು ಮತ್ತು ಬ್ಯಾಗ್‍ನಲ್ಲಿದ್ದ 45,000 ರೂ. ನಗದು ಹಾಗೇ ಇದೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ವಿಶೇಷ ಪೆÇಲೀಸ್ ತಂಡವನ್ನು ರಚಿಸಲಾಗಿದೆ.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin