ಮರದ ದಿಮ್ಮಿ ತುಂಬಿದ್ದ ಲಾರಿಗೆ ಇನೋವಾ ಡಿಕ್ಕಿ, ಮದುವೆಗೆ ಹೊರಟಿದ್ದ 7 ಮಂದಿ ಮಸಣಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಶಿವಮೊಗ್ಗ, ಮೇ.4-ಸ್ನೇಹಿತನ ಮದುವೆಗೆಂದು ಹೊರಟ ಏಳು ಮಂದಿ ಭೀಕರ ಅಪಘಾತದಲ್ಲಿ ಮಸಣ ಸೇರಿದ ದಾರುಣ ಘಟನೆ ತಾಲೂಕಿನ ಸಿಂಹಧಾಮದ ಬಳಿಯ ಮುದ್ದಿನಕೊಪ್ಪ ಬಳಿ ತಡರಾತ್ರಿ ಸಂಭವಿಸಿದೆ.   ಸಾಗರದಲ್ಲಿ ಸ್ನೇಹಿತನ ಮದುವೆಗೆ ಬೆಂಗಳೂರಿನಿಂದ ಇವರೆಲ್ಲರೂ ತೆರಳುತ್ತಿದ್ದರು.   ಮೃತರನ್ನು ಬೆಂಗಳೂರಿನ ಮಾಗಡಿ ಮೂಲದ ಚಾಲಕ ಮಧು ಮತ್ತು ಸಹೋದರ ಮೇಕಪ್ ಬಾಯ್ ಪ್ರವೀಣ್, ಮಂಡ್ಯದ ಮಲ್ಲೇಶ್, ಬೆಂಗಳೂರಿನ ಜಾಲಹಳ್ಳಿಯ ಶ್ರೀಧರ್, ಸೊರಬದ ರಾಜಶೇಖರ, ಶಿಕಾರಿಪುರದ ರಾಘವೇಂದ್ರ ಹಾಗೂ ಶಿವಮೊಗ್ಗ ಜಿಲ್ಲೆಯ ಚೋರಡಿಯ ಮಂಜುನಾಥ್ ಮೃತಪಟ್ಟವರು. ಇವರೆಲ್ಲ ಬೆಂಗಳೂರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸಾಗರದಲ್ಲಿ ಸ್ನೇಹಿತನ ಮದುವೆಗಾಗಿ ಬೆಂಗಳೂರುನಿಂದ ಕಾರಿನಲ್ಲಿ ಆಗಮಿಸುತ್ತಿದ್ದರು. ಆದರೆ ಮಧ್ಯರಾತ್ರಿ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

Accident--02
ಕೆಎ-4-ಸಿಎ-9494 ಸಂಖ್ಯೆಯ ಇನ್ನೋವಾ ಕಾರು ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬಹುಪಾಲು ಭಾಗ ಲಾರಿಯ ಒಳಗೆ ಸಿಲುಕಿ ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.   ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ಕಾರನ್ನು ಹಂತಹಂತವಾಗಿ ಕತ್ತರಿಸಿ ಒಳಗಿದ್ದ ದೇಹಗಳನ್ನು ಒಂದೊಂದಾಗಿ ತೆಗೆಯಲಾಗಿದೆ. 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ರಕ್ತದ ಕೋಡಿ ಹರಿದು ಹೋಗಿದ್ದ ದೃಶ್ಯ ರಣ ಭೀಕರವಾಗಿತ್ತು.

ಬೆಂಗಳೂರಿನಿಂದ ಸಾಗರಕ್ಕೆ ಮದುವೆಗೆಂದು ಮಧ್ಯರಾತ್ರಿ 12.30ರ ಸುಮಾರಿಗೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದಾಗ 10 ಕಿಲೋಮೀಟರï ದೂರದ ತ್ಯಾವರೆಕೊಪ್ಪದಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಾಗ ಮಳೆ ಆರಂಭವಾಗಿದೆ. ಈ ಸಮಯದಲ್ಲಿ ಮುಂದೆ ಸಾಗುತ್ತಿದ್ದ ನೀಲಗಿರಿ ಟಿಂಬರï ಸಾಗಿಸುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಇನ್ನೋವಾ ಕಾರು ಚಾಲಕ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.  ದುರದೃಷ್ಟವಶಾತ್ ಟಿಂಬರï ಲಾರಿಯಾಗಿದ್ದರಿಂದ ದಿಮ್ಮಿಗಳು ಕಾರಿಗೆ ಬಂದು ಗುದ್ದಿವೆ. ಆಗ ಇಡೀ ಇನ್ನೋವಾ ಕಾರು ನಜ್ಜುಗುಜ್ಜಾಗಿದ್ದು, ಅದರಲ್ಲಿ ಒಬ್ಬನ ಪ್ರಾಣ ಕೆಲವು ನಿಮಿಷಗಳ ಕಾಲ ಉಳಿದುಕೊಂಡಿತ್ತು. ಇವರೆಲ್ಲಾ ಬಾಡಿಗೆ ವಾಹನದಲ್ಲಿ ಬೆಂಗಳೂರಿನಿಂದ ಬಂದಿದ್ದರು ಎನ್ನಲಾಗಿದೆ.

 

 

 

Accident--03

ಮೂರು ಗಂಟೆ ಪರದಾಡಿದ ಪ್ರಯಾಣಿಕರು :

ಮಧ್ಯರಾತ್ರಿ ಅಪಘಾತ ಸಂಭವಿಸಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಕಾರು-ಮತ್ತು ಲಾರಿ ತೆರವಿಗೆ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು. ಈ ವೇಳೆ ಬಿ ಹೆಚï ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಪರದಾಡಬೇಕಾಯಿತು.   ಟಿಂಬರ್‍ಲಾರಿಯಲ್ಲಿದ್ದ ದಿಮ್ಮಿಗಳು ಹೊರಗೆ ಚಾಚಿದ್ದವು ಹಾಗೂ ರೇಡಿಯಂ ಅಥವಾ ಫಲಕಗಳನ್ನು ಲಾರಿ ಹಿಂದೆ ಹಾಕಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂತು.

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್, ಡಿವೈಎಸ್ಪಿ ಚಂದ್ರಶೇಖರ ಶೆಟ್ಟಿ, ಇನ್ಸಪೆಕ್ಟರ್ ಗುರುರಾಜ್ ಇನ್ನಿತರ ಅಧಿಕಾರಿಗಳ ನೇತೃತ್ವದಲ್ಲಿ ಮುಂಜಾನೆಯವರೆಗೂ ಈ ಕಾರ್ಯಾಚರಣೆ ನಡೆಯಿತು. ಅಪಘಾತ ಪರಿಣಾಮ ಎರಡು ಕಿ.ಮೀ. ಉದ್ದ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮï ಉಂಟಾಗಿತ್ತು. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin