ಮರದ ಮೇಲೆ ಪ್ರತ್ಯಕ್ಷ ಆಗ್ತಾಳೆ, ನಮಾಜ್ ಮಾಡಿ ಮಾಯವಾಗ್ತಾಳೆ, ಯಾರವಳು..?! (ವಿಡಿಯೋ)

ಈ ಸುದ್ದಿಯನ್ನು ಶೇರ್ ಮಾಡಿ

ಜೋನ್‍ಪುರ್ (ಉ.ಪ್ರ.), ಜು.31- ಉತ್ತರ ಪ್ರದೇಶದ ಜೋನ್‍ಪುರ್ ಎಂಬಲ್ಲಿ ಅತ್ಯಂತ ನಿಗೂಢವಾಗಿ ನಡೆಯುತ್ತಿರುವ ಅನಾಮಿಕ ಮಹಿಳೆಯೊಬ್ಬಳ ಪವಾಡ ಜನರಲ್ಲಿ ಭಾರೀ ಆಶ್ಚರ್ಯ, ಭಯ ಉಂಟುಮಾಡಿರುವ ಘಟನೆ ಪದೇ ಪದೇ ಪುನರಾವರ್ತನೆಯಾಗುತ್ತಿದೆ.  ಬೇವಿನ ಮರವೊಂದರ ತೆಳುವಾದ ರೆಂಬೆಯೊಂದರ ಮೇಲೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಈ ನಿಗೂಢ ಮಹಿಳೆ ನಮಾಜ್ ಮಾಡಿ ನಂತರ ಹಾಗೆಯೇ ಕಣ್ಮರೆಯಾಗುತ್ತಾಳಂತೆ. ಈಕೆ ಪ್ರತ್ಯಕ್ಷವಾಗುವ, ಮಾಯವಾಗುವ ಮಹಿಳೆ ಮರದ ಮೇಲಕ್ಕೆ ಹತ್ತಿದ್ದನ್ನಾಗಲಿ, ಕೆಳಕ್ಕೆ ಇಳಿದದ್ದನ್ನಾಗಲಿ ಯಾರೂ ಕಂಡಿಲ್ಲವಂತೆ. ಮನುಷ್ಯರ ತೂಕ ತಡೆಯದೆ ಮುರಿದು ಬೀಳುವಂತಹ ಅತ್ಯಂತ ತೆಳುವಾದ ರೆಂಬೆಯ ಮೇಲೆ ಈ ಮಹಿಳೆ ಕುಳಿತು ನಮಾಜ್ ಮಾಡುವುದಾದರೂ ಹೇಗೆ ಎಂಬುದು ಇಲ್ಲಿನ ಜನರ ಪ್ರಶ್ನೆಯಾಗಿದೆ.

ಅಷ್ಟೇ ಅಲ್ಲ, ನಮಾಜ್ ಮಾಡುವ ವೇಳೆ ಯಾವುದೇ ಆಧಾರವೂ ಇಲ್ಲದೆ ಆ ತೆಳು ರೆಂಬೆಯ ಮೇಲೆ ಕೂರುವುದಾದರೂ ಹೇಗೆ ಎಂಬುದು ಬಿಡಿಸಲಾಗದ ಸಮಸ್ಯೆಯಾಗಿದೆ.  ಇದೇನು ಯಾರೋ ಒಬ್ಬಿಬ್ಬರು ಹೆಣೆದ ಕಟ್ಟುಕಥೆ ಎನ್ನುವಂತಿಲ್ಲ. ಸುತ್ತಮುತ್ತಲ ಹಳ್ಳಿಗಳವರೆಲ್ಲ ಈ ಚಮತ್ಕಾರಿಕವಾದ ನಿಗೂಢ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಇದು ವಿಜ್ಞಾನಕ್ಕೊಂದು ಸವಾಲಾಗಿ ಪರಿಣಮಿಸಿದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin