ಮರಳು-ನೀರಿನ ಬಳಕೆ ಇಲ್ಲದೆ ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಬಹುದಂತೆ ..!

ಈ ಸುದ್ದಿಯನ್ನು ಶೇರ್ ಮಾಡಿ

Home
ಬೆಂಗಳೂರು, ಮೇ 17-ಮರಳು ಮತ್ತು ನೀರಿನ ಬಳಕೆ ಇಲ್ಲದೆ ಕಡಿಮೆ ಖರ್ಚು ಹಗೂ ವೇಗವಾಗಿ ಕಟ್ಟಡ ನಿರ್ಮಿಸಬಹುದಾದ ಫೋರೊಥರ್ಮ್ ಡ್ರೈಫಿಕ್ಸ್ ಸಿಸ್ಟಮ್ ತಂತ್ರಜ್ಞಾನವುಳ್ಳ ಇಟ್ಟಿಗೆಗಳನ್ನು ವೀನೆರ್ ಬರ್ಗರ್ ಸಂಸ್ಥೆ ಹೊರತಂದಿದೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀನೆರ್ ಬರ್ಗರ್ ಸಂಸ್ಥೆಯ ವ್ಯವಸ್ಥಾಪಕ ನಿರ್ಧೇಶಕ ಮೊನ್ನಂದ ಅಪ್ಪಯ್ಯ ಫೋರೋಥರ್ಮ್ ಡ್ರೈಫಿಕ್ಸ್ ಸಿಸ್ಟಮ್ ಮೂಲಕ ಇಟ್ಟಿಗೆ ತಯಾರಿಸಿ ಕಟ್ಟಡವನ್ನು ಶೀಘ್ರವಾಗಿ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದು ಎಂದು ಹೇಳಿದರು.ಇದು ಸಾಂಪ್ರದಾಯಿಕ ಗಾರೆಗೆ ಬದಲಾಗಿ ಒಣ ಗಾರೆಯ ವ್ಯವಸ್ಥೆಯಾಗಿದೆ ಈ ಫೋರೊಥರ್ಮ್ ಡ್ರೈಫಿಕ್ಸ್ ಸಿಸ್ಟಮ್‍ನ ಇಟ್ಟಿಗೆ ಬಳಸಿ ನಿರ್ಮಾಣ ಮಾಡಿದ ಗೋಡೆ -ಕಟ್ಟಡಗಳಿಗೆ ಕ್ಯೂರಿಂಗ್ ಅವಶ್ಯಕತೆಯೇ ಬರುವುದಿಲ್ಲ ಎಂದು ತಿಳಿಸಿದರು.  ನೈಸರ್ಗಿಕ ಸಂಪನ್ಮೂಲಗಳಾದ ನೀರು ಮತ್ತು ಮರಳಿನುಳಿತಾಯವಾಗುತ್ತದೆ. ಸಮಯ ಉಳಿತಾಯವಾಗುತ್ತದೆ.ನಿಮ್ಮ ಮನೆಗೆ ಅತ್ಯುತ್ತಮ ಗೋಡೆ ಕಟ್ಟಲು ಇದು ಒಂದು ಕ್ರಾಂತಿಕಾರಿ ಉತ್ಪನ್ನ ಎಂದು ಮೊನ್ನಂದ ಅಪ್ಪಯ್ಯ ತಿಳಿಸಿದರು. ಫೋ ರೋಥರ್ಮ್ ಡ್ರೈಫಿಕ್ಸ್ ಸಿಸ್ಟಮ್ ಅನ್ನು ಫೋರೋಥರ್ಮ್ ಪುಡಿ ಮಾಡಿದ ಜೇಡಿ ಮಣ್ಣಿನ ಟೊಳ್ಳು ಇಟ್ಟಿಗೆಗಳೊಡನೆ ಉಪಯೋಗಿಸಿದರೆ ಅಸಾಧಾರಣ ಡೈಮೆನ್ಷನ್ ಯುನಿಫಾರ್ಮಿಟಿಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin