ಮರಳು ಬ್ಲಾಕ್ ಗಣಿಗಾರಿಕೆ ಪುನಾರಂಭ ವಿರೋಧಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

9

ಹುನಗುಂದ,ಸೆ.30- ಮರಳು ಬ್ಲಾಕ್ ಗಣಿಗಾರಿಕೆ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶವಿದ್ದರೂ ಸೆ. 24ರಂದು ಗುತ್ತಿಗೆದಾರರು ಗ್ರಾಮಕ್ಕೆ ಆಗಮಿಸಿ ಮರಳು ಗಣಿಗಾರಿಕೆ ಪ್ರಾರಂಭಕ್ಕೆ ಮುಂದಾಗಿದ್ದನ್ನು ಶಾಂತರೀತಿ ಯಿಂದ ಪ್ರತಿಭಟಿಸಿದ ಗ್ರಾಮಸ್ಥರ ವಿರುದ್ಧ ಪೊಲೀಸ್ ಅಧಿಕಾರಿಗಳಾದ ಪಿ.ಎಸ್.ಐ, ಸಿ.ಪಿ.ಐ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೇಸು ದಾಖಲಿಸುವುದಾಗಿ ಹೆದರಿಸಿದ್ದಾರೆ ಎಂದು ಸಮಾಜಸೇವಕ ಸಂಗನಗೌಡ ಪಾಟೀಲ ಆರೋಪಿಸಿದ್ದಾರೆ. ತಾಲೂಕಿನ  ಗ್ರಾಮದ ಹಳ್ಳದ ಪಾತ್ರದಲ್ಲಿ ಬರುವ ಮರಳು ಬ್ಲಾಕ್ ಗಣಿಗಾರಿಕೆ ರದ್ದುಗೊಳಿಸುವಂತೆ ಎರಡು ಬಾರಿ ತಾಲೂಕಿನ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಿದ್ದರಿಂದ ಜಿಲ್ಲಾಧಿಕಾರಿಗಳು ತಾಲೂಕಿನ ಎಲ್ಲಾ ಅಧಿಕಾರಿಗಳಿಗೆ ಮಖಿಕವಾಗಿ ನಿಲ್ಲಿಸುವಂತೆ ಶಿಪಾರಸು ಮಾಡಿದ್ದರು.
ಅವರು ತಹಶೀಲ್ದಾರ ಕಛೇರಿ ಮುಂದೆ  ಗ್ರಾಮಸ್ಥರು ಮರಳು ಗಣಿಗಾರಿಕೆ ಬ್ಲಾಕನ್ನು ರದ್ದುಗೋಳಿಸುವಂತ್ತೆ ಪ್ರತಿಭಟಸಿ ತಶ್ಹಿಲ್ದಾg ಸುಭಾಶ ಸಂಪಗಾವಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ, ಮಳೆ ಇಲ್ಲದೆ ಗ್ರಾಮದಲ್ಲಿ ಬರಗಾಲ ಆವರಸಿ ಜನರು ಗುಳೆ ಹೊಗುವಂತಹ ಪರಿಸ್ಥಿತಿ ಉಂಟಾಗಿದ್ದು ಹಳ್ಳದಲ್ಲಿ ಅಂರ್ತಜಲ ಮಟ್ಟ ಸಾಕಸ್ಟು ಪ್ರಮಾಣದಲ್ಲಿ ಕುಸಿದಿರುವುದರಿಂದ ದಿನಂಪ್ರತಿ 5 ಕಿ.ಮೀ., ಹತ್ತಿರದಲ್ಲಿ ಕೆರೆ, ಬಾವಿ, ನದಿ, ಬೋರವೆಲ್ ಯಾವುದೇ ಜಲ ಮೂಲವಿಲ್ಲದ್ದರಿಂದ ಗ್ರಾಮದ ಜನ ನುವಾರು ಮತ್ತು ರೈತರಿಗೆ ಹಳ್ಳದ ಪಾತ್ರವನ್ನು ಅವಲಂಭಿತವಾಗಿದ್ದು ತಕ್ಷಣ ಮರಳು ಬ್ಲಾಕನ್ನು ರದ್ದುಗೊಳಿಸಿ.

 

 

ನೈಸರ್ಗಿಕ ಮರಳಿಗೆ ಬದಲಾಗಿ ಎಂ.ಸ್ಯಾಂಡ್ ಮರಳನ್ನು ವಿತರಿಸಿ ಗಣಿಗಾರಿಕೆಯಿಂದ ಆಗುವ ಪ್ರಕ್ರೃತಿ ವಿನಾಶವನ್ನು ಉಳಿಸಬೇಕೆಂದು ಹಾಗೂ ರದ್ದುಗೊಳಿಸದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಉಗ್ರದ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಿಂಗಪ್ಪ ಗದ್ದಿ, ಬಾಲನಗೌಡ ಗೌಡರ, ಮಲ್ಲಪ್ಪ ಸೊಂಡೂರ, ರಾಯಪ್ಪ ಎಮ್ಮೆಟ್ಟಿ,ಸಂಗಪ್ಪ ಚಲವಾದಿ, ಶವನಗೌಡ ಗದ್ದಿ, ಶರಣಮ್ಮ ಕುರಿ, ಮಾಹಂತ್ತಮ್ಮ ಕುರಿ ಪ್ರತಿಭಟಣೆಯಲ್ಲಿ ಬಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin