ಮರಳು ಸಾಗಣೆಯಲ್ಲಿ ಪೊಲೀಸರೇ ಶಾಮೀಲು : ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

sand-lorry

ಬಾಗೇಪಲ್ಲಿ, ಅ.26-ಚೇಳೂರು ಹೋಬಳಿ ಕೇಂದ್ರದಲ್ಲಿ ಎಗ್ಗಿಲ್ಲದೆ ಮರಳು ಸಾಗಣೆ ನಡೆಯುತ್ತಿದೆ. ಪೊಲೀಸರೆ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿ ರೈತರು ಪ್ರತಿಭಟನೆ ನಡೆಸಿದರು.ಹೊಸಹುಡ್ಯ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮರಳು ಲಾರಿಯನ್ನು ಹಿಡಿದ ರೈತರು ಅದರಲ್ಲಿ ಪಿಎಸ್‍ಐ ಪಿ.ವಿ.ರೆಡ್ಡಿ ಕೂಡ ಇದ್ದರೆಂದೂ ಆರೋಪಿಸಿ ಕೂಡಲೇ ಇವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಅಬಾಗೇಪಲ್ಲಿ, ಆಗ್ರಹಿಸಿದರು.ಸ್ಥಳಕ್ಕೆ ವೃತ್ತ ನಿರೀಕ್ಷಕ ಸಿ.ವಸಂತ್ ಭೇಟಿ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆದ ಸಂದರ್ಭದಲ್ಲಿ ಲಾರಿಯೊಳಗೆ ಪಿಎಸ್‍ಐ ಪಿ.ವಿ.ರೆಡ್ಡಿ ಇದ್ದುದು ಕಂಡುಬಂದಿರುವುದರಿಂದ ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ರೈತ ಮುಖಂಡರು ಲಿಖಿತ ದೂರು ನೀಡಿದರು.ಚೇಳೂರು ಹೋಬಳಿ ರೈತ ಸಂಘದ ಅಧ್ಯಕ್ಷ ಕೆ.ಎನ್.ಮಧುಸೂದನರೆಡ್ಡಿ, ಚಿನ್ನರಾಮಿರೆಡ್ಡಿ, ವೆಂಕಟರವಣಪ್ಪ, ಶ್ರೀರಾಮಪ್ಪ, ಶಂಕರ, ನರಸಿಂಹಪ್ಪ, ರಘುನಾಥರೆಡ್ಡಿ, ರವಿ, ಶ್ರೀನಿವಾಸ್ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin