‘ಮರಿ ಟೈಗರ್’ ಸಾಂಗ್ ನಲ್ಲಿ ನೀತು ದರ್ಬಾರ್

ಈ ಸುದ್ದಿಯನ್ನು ಶೇರ್ ಮಾಡಿ

Neetu

ವಿನೋದ್ ಪ್ರಭಾಕರ್ ನಟನೆಯ ಮರಿ ಟೈಗರ್ ಚಿತ್ರಕ್ಕಾಗಿ ಪಿ.ಎನ್.ಸತ್ಯ ಅವರು ಬರೆದಿರುವ ಅಂಕಲ್ ಅಂಕಲ್ ಮುಂದೆ ಬರ್ತಿರಾ ಎಂಬ ಹಾಡಿನ ಚಿತ್ರೀಕರಣ ಮಿನರ್ವ ಮಿಲ್‍ನಲ್ಲಿ ಹಾಕಲಾಗಿದ್ದ ಸೆಟ್‍ನಲ್ಲಿ ನಡೆದಿದೆ. ಹರಿಕೃಷ್ಣ ನೃತ್ಯ ಸಂಯೋಜಿಸಿದ್ದ ಈ ಹಾಡಿನ ಚಿತ್ರೀಕರಣದಲ್ಲಿ ವಿನೋದ್ ಪ್ರಭಾಕರ್, ನೀತು ಹಾಗೂ 25ಕ್ಕೂ ಹೆಚ್ಚು ನೃತ್ಯಗಾರರು ಅಭಿನಯಿಸಿದ್ದರು.ಯಾವ ಕವಿಯೂ ತಂದೆತಾಯಿಯ ದೇವರೆಂದು ಕರೆದು ಬಿಟ್ಟನೋ ಎಂಬ ಕಮಲ ಸಾರಥಿ ಅವರು ಬರೆದಿರುವ ಹಾಡಿನ ಚಿತ್ರೀಕರಣ ಮೆಜಿಸ್ಟಿಕ್ ರೈಲ್ವೇ ನಿಲ್ದಾಣದ ಸುತ್ತಮುತ್ತ ನಡೆದಿದೆ. ವಿನೋದ್ ಪ್ರಭಾಕರ್ ಅಭಿನಯಿಸಿದ್ದ ಈ ಹಾಡನ್ನು ಜೋಗಿ ಪ್ರೇಂ ಹಾಡಿದ್ದಾರೆ. ಈ ಹಾಡುಗಳ ಚಿತ್ರೀಕರಣದೊಂದಿಗೆ ಮರಿ ಟೈಗರ್ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.

Neetu-01
ನಂದ ಲವ್ಸ್ ನಂದಿತಾ, ಭಾಗ್ಯದ ಬಳೆಗಾರ ಚಿತ್ರಗಳನ್ನು ನಿರ್ಮಿಸಿದ ರಮೇಶ್ ಕಶ್ಯಪ್ ನಿರ್ಮಾಪಕರಾಗಿರುವ ಈ ಚಿತ್ರವನ್ನು ಪಿ.ಎನ್ ಸತ್ಯ ನಿರ್ದೇಶಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಕ್ಕೆ ಚಿಂಗಾರಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಎರಡನೇ ನಾಯಕಿಯಾಗಿದ್ದ ತೇಜು ನಾಯಕಿಯಾಗಿದ್ದಾರೆ. ಅಜಯ್ ಕುಮಾರ್ ಕಥೆ ಬರೆದಿರುವ ಈ ಚಿತ್ರಕ್ಕೆ ಮಲೇಷಿಯಾದ ರಾಕ್ ರವಿ ಸಂಗೀತ ನಿರ್ದೇಶನ ಮತ್ತು ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.

Neetu-02

Neetu-03

 

► Follow us on –  Facebook / Twitter  / Google+

Facebook Comments

Sri Raghav

Admin