ಮರೀನಾ ಬೀಚ್‍ನಲ್ಲಿ ಶೇ.90ರಷ್ಟು ತೈಲರಾಡಿ ತೆರವು, 65 ಟನ್ ಕೆಸರು ಹೊರಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Chennai--Fuel

ಚೆನ್ನೈ, ಫೆ.4-ಚೆನ್ನೈನ ಮರೀನಾ ಬೀಚ್‍ನಲ್ಲೇ ಜ.28 ರಂದು ಎರಡು ಸರಕು ಸಾಗಿಸುತ್ತಿದ್ದ ಹಡಗುಗಳ ಡಿಕ್ಕಿ ಸಂಭವಿಸಿ ತೈಲ ಸೋರಿಕೆಯಾಗಿದ್ದು, ಸಮುದ್ರದಲ್ಲಿ ಸೇರಿರುವ ಕೊಳಕು ತೈಲರಾಡಿಯನ್ನು ಹೊರತೆಗೆಯುವ ಕೆಲಸ ಶೇ.90ರಷ್ಟು ಮುಗಿದಿದೆ. ಇಲ್ಲಿಯವರೆಗೂ 65 ಟನ್‍ಗಳಷ್ಟು ಕೆಸರನ್ನು ಹೊರತೆಗೆಯಲಾಗಿದೆ. ಇನ್ನೆರಡು ದಿನಗಳಲ್ಲಿ ಸ್ವಚ್ಛತಾ ಕಾರ್ಯ ಕೆಲಸ ಮುಗಿಯಲಿದೆ ಎಂದು ಕೇಂದ್ರ ಹೇಳಿದೆ.

ಹೊರತೆಗೆಯಲಾಗಿರುವ ತೈಲ ಕೆಸರನ್ನು ಬೇರೆಡೆಗೆ ಸ್ಥಳಾಂತರಿಸಿ ಯಾವುದೇ ಅಪಾಯ ಜರುಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಫೆ.2ರವರೆಗೂ ಸುಮಾರು 65ಟನ್ ತೈಲ ಕೆಸರನ್ನು ತೆಗೆದಿದ್ದು, ತೈಲ ಹಾಗೂ ಕೆಸರು ಒಟ್ಟಿಗೇ ಸೇರಿಕೊಂಡಿದೆ. ಅದನ್ನು ಬೇರ್ಪಡಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.  ಭಾರತೀಯ ತೈಲ ನಿಗಮವು ಸಂಗ್ರಹಿಸಿದ್ದ ತೈಲ ಕೆಸರನ್ನು ವಿಲೇವಾರಿ ಮಾಡಲು ವಿಶೇಷ ಜೈವಿಕ ಪರಿಹಾರ ವಸ್ತುಗಳನ್ನು ನೀಡಿದೆ. ಎಚ್‍ಪಿಸಿಎಲ್ ಸಂಸ್ಥೆಯು, ನೂಕುವ ಗಾಡಿಗಳು ಮತ್ತು ಸಿಬ್ಬಂದಿಗಳು, ವಾಹನಗಳಿಗೆ ತೈಲ ಕೆಸರನ್ನು ಲೋಡ್ ಮಾಡುವುದಕ್ಕೆ ವ್ಯವಸ್ಥೆ ಮಾಡಿದೆ. ಚೆನ್ನೈನ ಬಂದರು ಮತ್ತು ತಮಿಳುನಾಡು ಸರ್ಕಾರವು ಇರ್ನಾವೂರ್ ಸೇರಿದಂತೆ ಕಾಶಿಮೇಡ್ ಪ್ರದೇಶಗಳಲ್ಲಿ ಮೆಡಿಕಲ್ ಕ್ಯಾಂಪ್ ನಿರ್ಮಿಸಿದೆ.

ತಿರುವಳ್ಳೂರ್, ಚೆನ್ನೈ, ಕಾಂಚೀಪುರಂ, ಇರ್ನಾವೂರ್, ಮರೀನಾಬೀಚ್, ಬೇಸಂತ್‍ನಗರ, ಕೊಟ್ಟಿವಕ್ಕಾಂ, ಪಾಲವಕ್ಕಾಂ, ನೀಲಾನ್‍ಕಾರ್ರೆ ಮತ್ತು ಇಂಜಂ ಬಕ್ಕಮ್ ಬೀಚ್‍ನಲ್ಲಿ ಸುಮಾರು 2 ಸಾವಿರ ಜನರು ಕೊಳಕು ತೈಲ ರಾಡಿ ತೆಗೆಯುವ ಸಮರೋಪಾದಿ ಕೆಲಸವನ್ನು ಕಾರ್ಯನಿರ್ವಹಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin