ಮರೆಯಾಗುತ್ತಿರುವ ಮೂಲ ಸಂಸ್ಕೃತಿ : ವಿಷಾದನೀಯ

ಈ ಸುದ್ದಿಯನ್ನು ಶೇರ್ ಮಾಡಿ

kanakapura--samskruti

ಕನಕಪುರ,ಆ.29- ಯುವ ಜನತೆ ದೇಶೀ ಜಾನಪದ ಕಲೆ, ಸಂಸ್ಕೃತಿ  ಮರೆತು ಪಾಶ್ಚಿಮಾತ್ಯ ಸಂಸ್ಕೃತಿ ಗೆ ಮಾರು ಹೋಗಿರುವುದಲ್ಲದೆ, ಟಿವಿಯ ರಿಯಾಲಿಟಿ ಶೋಗಳ ಹಾವಳಿಯಿಂದ ಜನರು ಮೂಲ ಸಂಸ್ಕೃತಿ ಯನ್ನು ಮರೆಯುತ್ತಿರುವುದು ವಿಷಾದನೀಯ ಸಂಗತಿ ಎಂದು ಸಾಹಿತಿ ಶಂಭುನಾಗಲಿಂಗೇಶ್ವರಸ್ವಾಮಿ ತಿಳಿಸಿದರು. ತಾಲ್ಲೂಕಿನ ಮರಳವಾಡಿ ಹೋಬಳಿ ಪಡುವಣಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅರುಂಧತಿ ಸಾಮಾಜಿಕ ಸಂಸ್ಕೃತಿ ಕ ಟ್ರಸ್ಟ್ ವತಿಯಿಂದ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಝೇಂಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ತನ್ನ ಸ್ವಾರ್ಥಹಿತಕ್ಕಾಗಿ ಮಾನವೀಯ ಮೌಲ್ಯ ಮತ್ತು ಸಿದ್ದಾಂತಗಳನ್ನು ಮರೆಯುತ್ತಿದ್ದಾನೆ ಎಂದರು.

ಮಂಟೇಸ್ವಾಮಿ ಮಠದ ಮರಿಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಜಾನಪದ ಕಲೆ ಮತ್ತು ಸಂಸ್ಕೃತಿ  ಉಳಿಯಬೇಕಾದರೆ ಗ್ರಾಮೀಣ ಭಾಗದ ಸೊಗಡನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ರಂಗಕಲಾವಿದ ಶಿವವೆಂಕಟಯ್ಯ ವಿಶೇಷ ಉಪನ್ಯಾಸ ನೀಡಿ, ಮಂಟೇಸ್ವಾಮಿ ಮಲೆಮಾದಪ್ಪ ಕುರಿತಾದ ಕಾವ್ಯಗಳು ಕರ್ನಾಟಕದ ಅತ್ಯಂತ ಶ್ರೀಮಂತ ಜಾನಪದ ಕಾವ್ಯಗಳಾಗಿವೆ. ನಮ್ಮ ನಾಡಿನ ಪರಂಪರೆಗೆ ಕಳಸಪ್ರಾಯವಾಗಿವೆ ಎಂದರು. ಮುಖ್ಯ ಶಿಕ್ಷಕಿ ಟಿ.ಸಿ.ಮಂಗಳ , ಟ್ರಸ್ಟ್ ಅಧ್ಯಕ್ಷ ಕೆ.ಆರ್ ನಾಗಲಿಂಗೇಶ್ವರ್, ಗ್ರಾಪಂ ಸದಸ್ಯ ಸಿದ್ದರಾಜು, ಎಸ್‍ಡಿಎಂಸಿ ಅಧ್ಯಕ್ಷೆ ಗಾಯಿತ್ರಿ, ಉಪಾಧ್ಯಕ್ಷ ರಾಮಚಂದ್ರಪ್ಪ, ಮಲ್ಲೇಶ್, ಟ್ರಸ್ಟ್ ಕಾರ್ಯದರ್ಶಿ ಶಂಕರಮ್ಮ, ಹೆಚ್.ಡಿ. ಶಿಲ್ಪ, ಮತ್ತಿತರರು ಹಾಜರಿದ್ದರು.

ಇದೇ ವೇಳೆ ಯಲವಳ್ಳಿಯ ಗುರುಮಲ್ಲಪ್ಪ ತಂಡದಿಂದ ವೀರಗಾಸೆ ನೃತ್ಯ, ರಸ್ತೆಜಕ್ಕಸಂದ್ರದ ಪಿ.ಪ್ರಶಾಂತ್, ರಾಜೇಶ್ ತಂಡದಿಂದ ತಮಟೆ ವಾದನ, ಹೊಳಸಾಲಯ್ಯ ತಂಡದಿಂದ ಜಾನಪದ ಗೀತೆ, ಶಿವವೆಂಕಟಯ್ಯ ತಂಡದಿಂದ ತತ್ವಪದ, ಸಿದ್ದರಾಜುರಿಂದ ಬುಡಕಟ್ಟು ಜನಾಂಗದ ನೃತ್ಯ, ಪಡುವಣಗೆರೆಯ ಮಹದೇವ್‍ರಿಂದ ಜಾನಪದಗೇತೆ, ಸಂಗಪ್ಪ ಹಿರೇಕುರುಬರರಿಂದ ಗೀಗಿಪದ, ಹರ್ಷಿತ ತಂಡದಿಂದ ಕೋಲಾಟ ಕಾರ್ಯಕ್ರಮ ನಡೆಸಿಕೊಟ್ಟರು.

 

► Follow us on –  Facebook / Twitter  / Google+

Facebook Comments

Sri Raghav

Admin