ಮಲಯಾಳಂ ನಟ ದಿಲೀಪ್‍ಗೆ 1.55 ಕೋಟಿ ರೂ.ಗೆ ಬೇಡಿಕೆಯಿಟ್ಟುದ್ದ ಬ್ಲಾಕ್‍ಮೇಲರ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Dilip

ತಿರುವನಂತಪುರಂ,ಜೂ.24-ಮಲಯಾಳಂನ ಖ್ಯಾತ ನಟ ದಿಲೀಪ್‍ಗೆ 1.5 ಕೋಟಿ ರೂ. ಬೇಡಿಕೆ ಇಟ್ಟು ಬಾಕ್ ಮೇಲರ್ ಒಬ್ಬ ಕರೆ ಮಾಡಿದ್ದು, ಈ ಸಂಬಂಧ ಕೊಚ್ಚಿ ಪೊಲೀಸರಿಗೆ ನಟ ದಿಲೀಪ್ ದೂರು ನೀಡಿದ್ದಾರೆ. ಬಹು ಭಾಷಾ ನಟಿಗೆ ಚಲಿಸುತ್ತಿದ್ದ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತು ಜೈಲಿನಲ್ಲಿರುವ ಪಲ್ಸರ್ ಸುನಿಯ ಸಹಚರನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಈ ಕರೆ ಮಾಡಿದ್ದಾನೆನ್ನಲಾಗಿದ್ದು, ದಿಲೀಪï ರ ಸ್ನೇಹಿತ ಹಾಗೂ ನಿರ್ದೇಶಕ ನಾದಿರ್ ಶಾ ಮತ್ತು ಮ್ಯಾನೇಜರ್ ಅಪುನಿ ಈ ಕರೆ ಸ್ವೀಕರಿಸಿದ್ದರು.

ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದಿಲೀಪ್‍ ಕೈವಾಡವಿದೆಯೆಂದು ಈ ಹಿಂದೆ ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಮಾನಹಾನಿ ಮೊಕದ್ದಮೆಯನ್ನು ದಿಲೀಪ್ ಹೂಡಿದ್ದರು. ಇದೀಗ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿರುವ ಪಲ್ಸರ್ ಸುನಿಯ ಸಹಚರ ದಿಲೀಪ್ ರಿಗೆ ಹಣದ ಬೇಡಿಕೆ ಇಟ್ಟು ಬಾಕ್ ಮೇಲ್ ಮಾಡಿದ್ದು, ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಡಿಯೋ ದಾಖಲೆಯನ್ನು ಪೊಲೀಸರಿಗೆ ದಿಲೀಪ್ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin