ಮಲೆನಾಡು ಭಾಗದಲ್ಲಿ ಸೋಲಿನ ವಿಶ್ಲೇಷಣೆ ನಡೆಸಿದ ಕಾಂಗ್ರೆಸ್..!

ಈ ಸುದ್ದಿಯನ್ನು ಶೇರ್ ಮಾಡಿ

Shankar-BL-1

ಚಿಕ್ಕಮಗಳೂರು, ಮೇ 17- ಜಿಲ್ಲೆಯ ಕಾಂಗ್ರೆಸ್ ಪಕ್ಷ ನಿರೀಕ್ಷಿಸಿದಂತೆ ಫಲಿತಾಂಶ ಬಂದಿಲ್ಲ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಬಿಜೆಪಿಗೆ ಜನರ ಬೆಂಬಲ ಲಭಿಸಿದೆ. ಇದಕ್ಕೆ ಕಾರಣವೆನೆಂಬುದನ್ನು ವಿಶ್ಲೇಷಣೆ ಮಾಡಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮತ್ತು ಚಿಕ್ಕಮಗಳೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ.ಎಲ್. ಶಂಕರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂದಿನ ವರ್ಷ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕಾಗಿದೆ ಈ ನಿಟ್ಟಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಭೂತ ಮಟ್ಟದಿಂದ ಸಂಘಟಿಸುವ ಕೆಲಸವನ್ನು ತಕ್ಷಣದಿಂದಲೇ ಪ್ರಾರಂಭ ಮಾಡುತ್ತೆವೆ. ತರೀಕೆರೆ ಮತ್ತು ಕಡೂರು ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷ ಎಡವಿದ್ದು ಇದನೆಲ್ಲಾ ಸರಿಪಡಿಸಿಕೊಂಡು ಮುಂದಿನ ಚುನಾವಣೆಗೆ ಸನ್ನದ್ದರಾಗುತ್ತೆವೆ. ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಾನಂz ಸ್ವಾಮಿ, ನಗರ ಸಭಾ ಸದಸ್ಯರಾದ ರೂಭಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ವಿಜಯ್‍ಕುಮಾರ್ ಸೇರಿದಂತೆ ಮತ್ತಿತ್ತರಿದ್ದರು.

Facebook Comments

Sri Raghav

Admin