ಮಲೆನಾಡು ಮಿತ್ರ ಪ್ರಶಸ್ತಿಗೆ ಕಾಗೋಡು ತಿಮ್ಮಪ್ಪ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Kagodu

ಬೆಂಗಳೂರು , ಆ.23- ಹಿರಿಯ ರಾಜಕಾರಣಿ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಮಲೆನಾಡು ಮಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಲೆನಾಡು ಮಿತ್ರ ವೃಂದ ವತಿಯಿಂದ ಪ್ರತಿ ವರ್ಷ ಮಲೆನಾಡು ಮಿತ್ರ ಹಾಗೂ ಮಲೆನಾಡು ಸಾಧಕರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿಗೆ ಕಾಗೋಡು ತಿಮ್ಮಪ್ಪ ಅವರು ಮಲೆನಾಡು ಮಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಅಡಕೆ ಸುಲಿಯುವ ಯಂತ್ರ ಕಂಡು ಹಿಡಿದಿರುವ ತೀರ್ಥಹಳ್ಳಿಯ ಕೆ.ವಿಶ್ವನಾಥ್, ಐಎಎಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬಂಡಿಗಡಿ ಎಚ್.ಎಸ್.ಮಂಜುನಾಥ್, ಜಾನಪದ ಹಾಗೂ ಲಾವಣಿ ಗೀತೆಯಲ್ಲಿ ಸಾಧನೆಗೈದ ಕೊಪ್ಪದ ಕುಂಚೂರು ಹರೀಶ್ ಹಾಗೂ ಉದ್ಯಮಿ ಮಾಸ್ತಿಕಟ್ಟಯ್ಯ ಲಕ್ಷ್ಮೀ ದೇವರಾಜ್ ಅವರನ್ನು ಮಲೆನಾಡಿನ ಸಾಧಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin