ಮಲೆನಾಡ ಸೊಬಗು ಬಣ್ಣನೆಗೆ ಮೀರಿದ್ದು : ಜಿ.ಕೆ.ಗೋವಿಂದರಾವ್

ಈ ಸುದ್ದಿಯನ್ನು ಶೇರ್ ಮಾಡಿ

Malenadu ಬೆಂಗಳೂರು, ಡಿ.30- ಅದ್ಭುತವಾದ ನಯನಮನೋಹರ ಮಲೆನಾಡಿನ ಸೌಂದರ್ಯ ರಾಶಿಯನ್ನು ಕಸ್ತೂರಿ ಕನ್ನಡದ ಹೊರತಾಗಿ ಬೇರೆ ಭಾಷೆಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಎಂದು ಪರಿಸರವಾದಿ, ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದರು.  ಮಲೆನಾಡು ಮಿತ್ರ ವೃಂದ ಅಭಿಮಾನಿ ವಸತಿ ಸಭಾಂಗಣದಲ್ಲಿ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಮಲೆನಾಡು ಮತ್ತು ಕುವೆಂಪು ವಿಷಯ ಕುರಿತು ಮಾತನಾಡಿದ ಅವರು, ಕುವೆಂಪು ಸಾಹಿತ್ಯ ಆಂಗ್ಲ ಭಾಷೆಯಲ್ಲಿ ರಚಿತವಾಗಿದ್ದರೆ ನೋಬೆಲ್ ಪ್ರಶಸ್ತಿ ದೊರೆಯುತಿತ್ತು ಎಂದರು.  ಯಾವುದೇ ವ್ಯಕ್ತಿ ನಿರಂತರವಾಗಿ ತಮ್ಮ ಮನಸ್ಸನ್ನು ಮೇಲ್ಮಟ್ಟಕ್ಕೆ ಮತಾಂತರಗೊಳ್ಳಬೇಕು. ಜಾತಿ-ಪಂಥ, ಮೇಲು-ಕೀಳು ದೂರಮಾಡಿ ಎಲ್ಲರೊಂದಿಗೂ ಬೆರೆತು ಪರಿಪೂರ್ಣ ವ್ಯಕ್ತಿಗಳಾಗುವತ್ತ ಹೆಜ್ಜೆ ಇರಿಸಬೇಕೆಂದು ಕಿವಿಮಾತು ಹೇಳಿದರು.

Malenadu-1

ದುಶ್ಚಟಕ್ಕೆ ಬಲಿಯಾಗುವುದು ತಮ್ಮ ತಮ್ಮ ಮನಸ್ಸಿನ ಜತೆಗೆ ವ್ಯಬಿಚಾರ ನಡೆಸಿದಂತೆ ಹಾಗಾಗಿ ಮೌಢ್ಯಗಳನ್ನು ಬದಿಗೊತ್ತಿ ಮನುಷ್ಯ ಸಂಬಂಧಗಳನ್ನು ಗೌರವಿಸಬೇಕೆಂದ ಅವರು, ಪ್ರಕೃತಿ ಸೃಷ್ಟಿಯಲ್ಲಿ ಮನುಷ್ಯನಿಗೆ ಯಾವುದೇ ಜಾತಿಯ ಹಣೆಪಟ್ಟಿಯಿಲ್ಲ ಎಂದು ಪ್ರತಿಪಾದಿಸಿದರು. ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಸುಚಿತ್ರ ಫಿಲ್ಮಂ ಸಿಟಿಯ ಅಧ್ಯಕ್ಷ ರವೀಂದ್ರನಾಥ ಠ್ಯಾಗೋರ್ ಮಾತನಾಡಿ, ಮನುಷ್ಯನಾಗಿ ಹುಟ್ಟಿದವನು ತಾನು ಬೆಳೆದಂತೆ ದುರಾಸೆ, ಅಹಂಕಾರವನ್ನು ಮೈದುಂಬಿಕೊಳ್ಳುತ್ತಿದ್ದಾನೆ ಎಂದು ಬೇಸರ ವ್ಯಕಪಡಿಸದರು. ಇಂದಿನ ವ್ಯವಸ್ಥೆಯಲ್ಲಿ ಮೌಢ್ಯತೆ ಅಧಿಕಗೊಳ್ಳುತ್ತಿದ್ದು ವಿಶ್ವ ಮಾನವತ್ವ ಹರಡುವಲ್ಲಿ ನಾವೆಲ್ಲರೂ ಕೈಜೋಡಿಸೋಣವೆಂದರು. ಮಿತ್ರವೃಂದದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಅಧ್ಯಕ್ಷತೆ ವಹಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin