ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಮಹಾಲಯಅಮಾವಾಸೆ ಜಾತ್ರೆ 

ಈ ಸುದ್ದಿಯನ್ನು ಶೇರ್ ಮಾಡಿ

malemahadeshwara3ಹನೂರು,ಸೆ.30-ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಹಾಗೂ ಜಿಲ್ಲೆಯ ಪ್ರಸಿದ್ದ ಯಾತ್ರ ಸ್ಥಳ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಹಾಲಯ ಅಮಾವಾಸ್ಯೆ ಜಾತ್ರೆ ಯ ಪ್ರಯುಕ್ತ ಇಂದು ಲಕ್ಷಾಂತರ ಭಕ್ತರು ಉಘೇ ಉಘೇ ಮಾದಪ್ಪ ಎನ್ನುತ್ತಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ದೆ ಭಕ್ತಿ ಸಡಗರದಿಂದ ಪೂಜ ಕೈಂ ಕಾರ್ಯಗಳನ್ನು ನೆರವೇರಿಸಿದರು. ಇಂದು ಬೆಳಗಿನಜವ 3ರಿಂದ 6 ಗಂಟೆವರೆಗೆ ಎಣ್ಣೆಮಜ್ಜನ ಸೇವೆ ಪಂಚಾಭಿಷೇಕ ಹಾಲಿನ ಅಭಿಷೇಕ ಹಾಗೂ ಬಿಲ್ವಾರ್ಚನೆ ಪೂಜೆಗಳು ಜರುಗಿದವು.

hanur 1
ದೇವಾಲಯವನ್ನು ತಲಿರುತೋರಣ ವಿದ್ಯುತ್ ದೀಪಾಲಂಕಾರಗೊಂಡು ಕಂಗೊಳಿಸುವಂತೆ ಮಾಡಲಾಗಿತ್ತು. ಅಲ್ಲದೆ ವಿವಿಧ ಫಲಪುಷ್ಷಗಳಿಂದ ದೇವರ ವಿಗ್ರಹವನ್ನು ಸಿಂಗರಿಸಿ ಕಂಗೊಳಿಸುತ್ತಿತ್ತು. ಆಗಮಿಸಿದಂತ ಭಕ್ತರು ಹರಕೆಯ ರೂಪದಲ್ಲಿ ಹುಲಿವಾಹನ ರುದ್ರಾಕ್ಷಿ ಮಂಟಪ ಹಾಗೂ ಬಸವ ವಾಹನಗಳ ಉತ್ಸವವನ್ನು ನೆರವೇರಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವುದರ ಮೂಲಕ ಉತ್ಸವವನ್ನು ನೆರವೇರಿಸಿದರು.

hanur 2

ಉತ್ಸವದ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಹಾಗೂ ಸಾರ್ವಜನಿಕರು ತಾವು ಜಮೀನಿನಲ್ಲಿ ಬೆಳೆದ ಫಸಲನ್ನು ಒಕ್ಕಣೆ ಮಾಡುವ ವೇಳೆ ಮೊದಲ ದಾನ್ಯವನ್ನು ಎತ್ತಿಟ್ಟಿದ್ದು ಆ ಧವಸ -ದಾನ್ಯಗಳನ್ನು ಮತ್ತು ಹಣ್ಣು , ಧವನ, ಚಿಲ್ಲರೆ ಹಣವನ್ನು ಹುಲಿ ಬಸವ ರುದ್ರಾಕ್ಷಿ ವಾಹನಗಳ ಉತ್ಸವದ ಮೇಲೆ ಎಸೆದು ಭಕ್ತಿಯನ್ನು ಸಮರ್ಪಿಸಿದರು. ಇನ್ನೂ ಕೆಲವರು ದಂಡಿನ ಕೋಲನ್ನು ಹೊತ್ತು ಉತ್ಸವದಲ್ಲಿ ಪಾಲ್ಗೊಂಡರು. ಆಲಂಬಾಡಿ ಬಸವನಿಗೆ ಹಾಲಿನ ಅಭೀಷೇಕ ಮತ್ತು ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

Exif_JPEG_420

ಹರಕೆ ಹೊತ್ತ ಭಕ್ತರು ಧೂಪದಸೇವೆ ಮುಡಿಸೇವೆ ಉರುಳು ಸೇವೆ ಪಂಜಿನ ಸೇವೆಗಳನ್ನು ನೆರವೇರಿಸಿದರು. ಇನ್ನೂ ಕೆಲವು ವಿವಿಧ ಹರಕೆ ಭಕ್ತರು ದೇವಸ್ಥಾನದ ಸುತ್ತ ಕಸ ಗೂಡಿಸುವ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾದರು. ಜಿಲ್ಲೆಯ ನಾನಾ ಕಡೇಗಳಿಂದ ಪೊಲೀಸರು ಗೃಹ ರಕ್ಷಕದಳದ ಸಿಬ್ಬಂಧಿಗಳು ಆಗಮಿಸಿ ಮಲೆ ಮಹದೇಶ್ವರಬೆಟ್ಟ ಸೇರಿದಂತೆ ತಾಳಬೆಟ್ಟ ಸಾಲೂರು ಮಠ ಅಂತರಗಂಗೆ ಜನಸಂದಾಣಿ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

 

► Follow us on –  Facebook / Twitter  / Google+

Facebook Comments

Sri Raghav

Admin