ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛ ಭಾರತ್ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

HANURU99ಹನೂರು, ಆ.25- ಮಲೆಮಹದೇಶ್ವರಬೆಟ್ಟದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಉಪಾಧ್ಯಕ್ಷ ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಾಲೂರು ಮಠದ ಮಹದೇಶ್ವರ ಪ್ರೌಢಶಾಲೆಯಿಂದ ಮಕ್ಕಳು ತಂಬಡಗೆರಿ, ಗುರುನಗರ, ಮಲೆಮಹದೇಶ್ವರ ಬೆಟ್ಟದ ಬಸ್ಸ್ ನಿಲ್ದಾಣ ಸೇರಿದಂತೆ ಹಳೇ ತಂಬಡಿ ಬೀದಿಗಳಲ್ಲಿ ನಾಮಫಲಕ ಹಿಡಿದು ಜಾಥ ನಡೆಸಿದರು.
ಈ ವೇಳೆ ಪಿಡಿಒ ಗಂಗಾಧರ್ ಸ್ವಚ್ಛತೆಯ ಅರಿವಿನ ಬಗ್ಗೆ ವಿವರವಾಗಿ ತಿಳಿಸಿದರು. ಕೊಳ್ಳೇಗಾಲದ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್‍ಸ್ವಾಮಿ, ಜಿಲ್ಲಾ ಸ್ವಚ್ಛ ಭಾರತ್ ಅಭಿಯಾನ ಸಂಯೋಜಕ ಮಹದೇವ, ಮುಖಂಡರಾದ ವಿಜಯ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin