ಮಲೇರಿಯಾಗೆ ಮನೆ ಮದ್ದು

ಈ ಸುದ್ದಿಯನ್ನು ಶೇರ್ ಮಾಡಿ

Malaria

ಮಲೇರಿಯಾ ಮತ್ತು ಡೆಂಗ್ಯೂ ಎಂದರೆ ಎಲ್ಲರಿಗೂ ಭಯ. ಮಲೇರಿಯಾ ಬಾರದಂತೆ ತಡೆಗಟ್ಟಲು ಏವೆಲ್ಲಾ ಮಾಡಬೇಕೋ ಅದನ್ನು ಜನ ಮಾಡಲು ಮುಂದಾಗುತ್ತಾರೆ. ಅದಕ್ಕಿಲ್ಲಿದೆ ಮದ್ದು. ನಮ್ಮ ದೇಹಕ್ಕೆ ಪೋಷಕಾಂಶಗಳ ಅಗತ್ಯ ಸಾಕಷ್ಟಿದೆ. ಇದು ಸಿಗುವುದು ನಾವು ತಿನ್ನುವ ಹಣ್ಣು ಮತ್ತು ತರಕಾರಿಗಳಲ್ಲಿ. ಅದರ ರಸ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭ ಹೇಳಲಸಾಧ್ಯ.ಹುಳಿ ಮಿಶ್ರಿತ ಹಣ್ಣು :

ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಇರುತ್ತದೆ. ಜ್ವರ ಬಾರದಂತೆ ತಡೆಗಟ್ಟಲು ಈ ಹುಳಿ ಮಿಶ್ರಿತ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.  ದ್ರಾಕ್ಷಿ ತಿಂದರೆ ಶೀತವಾಗುತ್ತದೆಂದೋ, ಔಷಧ ಸಿಂಪಡಿಸುತ್ತಾರೆಂದೋ ಬಹಳ ಮಂದಿ ಸೇವಿಸುವುದು ಕಡಿಮೆ. ಆದರೆ ದ್ರಾಕ್ಷಿ ಮಲೇರಿಯಾ ರೋಗಿಗಳಿಗೆ ಹೆಚ್ಚು ಉಪಯುಕ್ತ.  ಹಣ್ಣಿನ ರಸವನ್ನು ಹಾಗೇ ಸಕ್ಕರೆ ಅಥವಾ ಇನ್ಯಾವುದೇ ವಸ್ತುಗಳನ್ನು ಸೇರಿಸದೇ ಬಳಸುವುದರಿಂದ ಹಲವು ಉಪಯೋಗಗಳಿವೆ. ಹಸಿ ತರಕಾರಿಗಳ ರಸದಲ್ಲಿ ಔಷಧಗಳ ಭಂಡಾರವಿದೆ. ಬೆಳ್ಳುಳ್ಳಿ, ಈರುಳ್ಳಿ ಅಥವಾ ಮೂಲಂಗಿ ರಸವನ್ನು ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ.

Malaria

ಶೀತ, ಕೆಮ್ಮು ಇದ್ದರೆ ಆಯುರ್ವೇದ ಪದ್ಧತಿಯಲ್ಲಿ ಶುಂಠಿಯೇ ಮನೆ ಮದ್ದು. ಇದರಲ್ಲಿರುವ ಪೋಷಕಾಂಶಗಳು ದೇಹ ಮತ್ತು ಮಿದುಳಿಗೆ ಭಾರೀ ಉತ್ತಮ. ಹಲವು ರೋಗಗಳಿಗೆ ಇದು ಉತ್ತಮ ಮನೆ ಮದ್ದು.  ಹಸಿ ತರಕಾರಿಗಳ ರಸ ಸೇವಿಸುವುದರಿಂದ ಅಸಿಡಿಟಿ ಉತ್ಪಾದನೆಯಾಗದಂತೆ ನೋಡಿಕೊಳ್ಳುತ್ತದೆ. ದೇಹದ ಸಮತೋಲನ ಕಾಪಾಡುತ್ತದೆ. ಇದರಲ್ಲಿ ಮಿನರಲ್ಸ್  , ವಿಟಮಿನ್ ಗಳು ಹೇರಳವಾಗಿರುತ್ತವೆ. ಇದರಿಂದ ಅಕಾಲ ವಯಸ್ಸಾಗುವಿಕೆ ತಡೆಯಬಹುದು.
ಹಸಿ ತರಕಾರಿಗಳ ರಸದಿಂದ ಅಂಗಾಂಶಗಳ ಬೆಳವಣಿಗೆ ಬೇಗನೇ ಆಗುತ್ತದೆ. ಹೀಗಾಗಿ ಗಂಭೀರ ಗಾಯಗಳು ಬೇಗನೇ ಗುಣವಾಗಬಹುದು. ತರಕಾರಿ ರಸ ಪ್ರತ್ಯೇಕವಾಗಿ ಜೀರ್ಣವಾಗುವ ಅಗತ್ಯವಿಲ್ಲ. ಇದು ನೇರವಾಗಿ ರಕ್ತಕ್ಕೆ ಸೇರ್ಪಡೆಯಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin