ಮಲೇಷ್ಯಾದಿಂದ ಮರಳು ಆಮದು, ಪ್ರತಿ ಟನ್ ಗೆ 3,500 ರೂ.ಗೆ ದರ ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

Sand-Import--01

ಬೆಂಗಳೂರು,ಆ.7-ರಾಜ್ಯದಲ್ಲಿ ಮರಳಿನ ಕೊರತೆ ನೀಗಿಸಲು ಮಲೇಷ್ಯಾದಿಂದ ಮರಳು ಆಮದಿಗೆ ರಾಜ್ಯ ಸರ್ಕಾರ ಮುಂದಾಗಿದ್ದು ಪ್ರತಿ ಟನ್ ಆಮದು ಮರಳಿಗೆ 3,500 ರೂ.ಗೆ ದರ ನಿಗದಿಯಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ವ್ಯವಸ್ಥೆ ಮಾದರಿಯಲ್ಲೇ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಮರಳು ನೀಡಲು ಉದ್ದೇಶಿಸಲಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಿರ್ಮಿಸುವ ಅನುಮತಿ ಪಡೆಯಬೇಕು. ಕಟ್ಟಡದ ಪ್ರಮಾಣ, ಅಗತ್ಯವಿರುವ ಮರಳು ಪ್ರಮಾಣ ಆಧರಿಸಿ ಮರಳು ಹಂಚಿಕೆ ಮಾಡಲಾಗುತ್ತದೆ ಎಂದರು.

ಪ್ರಸ್ತುತ ರಾಜ್ಯದಲ್ಲಿ ಸುಮಾರು ಒಂದು ಲಾರಿಗೆ ಎಂಭತ್ತರಿಂದ ಒಂದು ಲಕ್ಷ ರೂ. ತಗಲುತ್ತಿದೆ. ಈ ರೀತಿ ನೀಡುವುದರಿಂದ 35 ಸಾವಿರ ರೂ. ನಷ್ಟವಾಗಲಿದೆ. ಜನರಿಗೂ ಕೂಡ ಕೈಗೆಟುಕುವ ದರದಲ್ಲಿ ಮರಳು ದೊರೆತಂತಾಗುತ್ತದೆ ಎಂದ ಅವರು, ಪರಿಸರ ಸಮಿತಿಯ ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯಮಟ್ಟದಲ್ಲಿ ಇಂತಹ ಸಮಿತಿ ರಚನೆಯಾದರೆ ಅನುಕೂಲವಾಗುತ್ತದೆ. ಎಂಎಸ್‍ಐಎಲ್ ಮೂಲಕ ಮರಳನ್ನು ನೀಡಲಾಗುವುದು. ಇದರಿಂದ ಮರಳಿನ ಅಭಾವ ತಗ್ಗಲಿದೆ ಎಂದು ಹೇಳಿದರು. ಕರಾವಳಿ ಭಾಗದಲ್ಲಿ ಪ್ರತ್ಯೇಕ ಮರಳು ನೀತಿ ರೂಪಿಸಲಾಗುವುದು ಎಂದರು.

ರಾಜ್ಯದಲ್ಲಿ 1.83 ಕೋಟಿ, ಅಡಿಕೆ ಮರ, 45 ಲಕ್ಷ ತೆಂಗಿನ ಮರ ಹಾಳಾಗಿದೆ. ಕಳೆದ 16 ವರ್ಷಗಳಲ್ಲಿ 13 ವರ್ಷ ಬರವನ್ನೇ ಅನುಭವಿಸುವಂತಗಿದೆ. ಆಗಸ್ಟ್ 15ರೊಳಗೆ ಎಲ್ಲ ಜಿಲ್ಲೆಗಳ ವರದಿ ಪಡೆದು ಕೇಂದ್ರ ಸರ್ಕಾರಕ್ಕೆ ರಾಜ್ಯದ ಬರ ಪರಿಸ್ಥಿತಿ ನಿಭಾಯಿಸಲು ನೆರವು ನೀಡಲು ಕೋರಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin