ಮಲೈಕಾ-ಅರ್ಜುನ್ ನಡುವೆ ಕುಚ್ ತೊ ಹೈ..?

ಈ ಸುದ್ದಿಯನ್ನು ಶೇರ್ ಮಾಡಿ

Malike-aroa

ಬಾಲಿವುಡ್ ನಟಿ ಮಲೈಕಾ ಅರೋರಾ ಖಾನ್ ಮತ್ತು ಉದಯೋನ್ಮುಖ ನಟ ಅರ್ಜುನ್ ಕಪೂರ್ ಮಧ್ಯೆ ಲವ್ವಿ-ಡವ್ವಿ ಶುರುವಾಗಿದೆಯೇ ? ಇಂಥದ್ದೊಂದು ಅನುಮಾನ ಬಿ-ಟೌನ್‍ನಲ್ಲಿ ಕಾಡುತ್ತಿದೆ. ನಟ ಅರ್ಬಾಜ್ ಖಾನ್‍ನಿಂದ (ಸಲ್ಮಾನ್‍ಖಾನ್ ಸಹೋದರ) ಬೇರಾದ ನಂತರ ಮಲೈಕಾ ಅರ್ಜುನ್ ಜೊತೆ ಸುತ್ತಾಡುತ್ತಿರುವುದು, ಅದರಲ್ಲೂ ತಡರಾತ್ರಿ ಸಭೆ ಸೇರುತ್ತಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.ಒಂದು ಮಗುವಿನ ತಾಯಿಯಾಗಿರುವ ಈ ಆಂಟಿಗೆ ತರುಣನ ಜತೆ ತಡರಾತ್ರಿಯಲ್ಲಿ ಏನು ಕೆಲಸ ಎಂಬ ಗುಸುಗಸು ಹಬ್ಬಿದೆ. ಈ ಪುಕಾರುಗಳಿಗೆ ಇಂಬು ನೀಡುವಂತೆ ಕಳೆದ ವಾರ ಅರ್ಜುನ್, ಮಲೈಕಾ ಅಪಾರ್ಟ್‍ಮೆಂಟ್‍ಗೆ ರಾತ್ರಿ 10.30ಕ್ಕೆ ಪ್ರವೇಶಿಸಿ ಮತ್ತು ಅಲ್ಲಿ ಬಹು ಸಮಯ ಕಳೆದು ಹಿಂದಿರುಗಿದ ವಿಡಿಯೋ ದೃಶ್ಯ ಸಾಮಾಜಿಕ ಜಾಲ  ತಾಣಗಳಲ್ಲಿ ವೈರಲ್ ಆಗಿದೆ.

ಅರ್ಬಾಜ್ ಖಾನ್‍ರನ್ನು ವಿವಾಹವಾಗಿದ್ದ ಮಲೈಕಾ ಸಂಬಂಧ ಹಳಸಿದ ನಂತರ ಆತನಿಂದ ಪ್ರತ್ಯೇಕಗೊಂಡು ತನ್ನ ಮಗನೊಂದಿಗೆ ಅಪಾರ್ಟ್‍ಮೆಂಟ್‍ನಲ್ಲಿದ್ದಾಳೆ. ಇತ್ತೀಚೆಗೆ ಮಲೈಕಾ ಮತ್ತು ಅರ್ಜುನ್ ಒಡನಾಟ ಅತಿ ಎನಿಸುವಷ್ಟು ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಇವರಿಬ್ಬರ ಲವ್ವಿ-ಡವ್ವಿ ಬಗ್ಗೆ ರೂಮರ್‍ಗಳು ಹರಿದಾಡುತ್ತಿದೆ. ಅರ್ಜುನ್ ಇತ್ತೀಚೆಗೆ ಮಲೈಕಾ ಜೊತೆ ಓಡಾಡುತ್ತಿರುವುದನ್ನು ನೋಡಿದ ಆತನ ತಂದೆ ನಿರ್ಮಾಪಕ ಬೋನಿ ಕಪೂರ್, ಆಂಟಿ ಜೊತೆ ನಿನಗೇನು ಕೆಲಸ. ಆಕೆಯಿಂದ ದೂರು ಇರು ಎಂದು ಗದರಿಸಿದ್ದಾರೆ. ಆದರೂ ಇವರ ಭೇಟಿಗೆ ಭಂಗ ಬಂದಿಲ್ಲ.

 

► Follow us on –  Facebook / Twitter  / Google+

Facebook Comments

Sri Raghav

Admin