ಮಲ್ಟಿ ಸ್ಟಾರ್ ಸಿನಿಮಾ ‘ಲೀಡರ್’

ಈ ಸುದ್ದಿಯನ್ನು ಶೇರ್ ಮಾಡಿ
afAGagAGG
ಲೀಡರ್

ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಛನದಲ್ಲಿ  ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸುತ್ತಿರುವ, ಶಿವರಾಜ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ಚಿತ್ರ ಲೀಡರ್.   ಈಗಾಗಲೇ ಹಾಡುಗಳ ಧ್ವನಿಮುದ್ರಣ ಮುಕ್ತಾಯಗೊಳಿಸಿ, ಆಗಸ್ಟ್ 18ರಂದು ಮುಹೂರ್ತ ಆಚರಿಸಿಕೊಳ್ಳಲಿರುವ ಈ ಚಿತ್ರ ಕಳೆದ ಕೆಲವು ದಿನಗಳಿಂದ ಅನೇಕ ಕಾರಣಗಳಿಗಾಗಿ ಸುದ್ದಿ ಮಾಡುತ್ತಲೇ ಇದೆ.   ರೋಸ್ ಚಿತ್ರ ಖ್ಯಾತಿಯ ಸಹನಾ ಮೂರ್ತಿ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ಲೀಡರ್ ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳೆಗೆರೆ ದಂಪತಿಯ ಪುತ್ರಿ ಪುಟಾಣಿ ಪರಿಣಿತ ಅಭಿನಯಿಸುತ್ತಿದ್ದಾಳೆ. ಶಿವರಾಜ್‍ಕುಮಾರ್ ಮಗಳ ಪಾತ್ರದಲ್ಲಿ ಪರಿಣಿತ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಇದಲ್ಲದೆ, ಲೀಡರ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್ ಕೂಡಾ ಅಭಿನಯಿಸುತ್ತಿದ್ದಾರೆ ಮತ್ತು ಪ್ರಣೀತ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ವಿಚಾರ ಈಗಾಗಲೇ ಜಾಹೀರಾಗಿದೆ.  ಈಗ ಲೀಡರ್ ಚಿತ್ರತಂಡದಿಂದ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಹೊರ ಬಿದ್ದಿದೆ. ಅದೇನೆಂದರೆ, ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ ಕೂಡಾ ಶಿವರಾಜ್ ಕುಮಾರ್ ಅವರೊಟ್ಟಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ.

ದುನಿಯಾ ಚಿತ್ರ ತೆರೆಗೆ ಬಂದ ದಿನ ದಿಂದಲೂ ಶಿವರಾಜ್ ಕುಮಾರ್ ಮತ್ತು ಪುನೀತ್ ಯೋಗಿಯ ನಟನೆಯ ಬಗ್ಗೆ ಸಂದರ್ಭ ಸಿಕ್ಕಾಗಲೆಲ್ಲಾ ಪ್ರಶಂಸೆ ವ್ಯಕ್ತಪಡಿಸುತ್ತಲೇ ಬಂದಿದ್ದರು. ಪುನೀತ್ ಅವರೊಂದಿಗೆ ನಟಿಸಿದ ಎರಡೂ ಚಿತ್ರಗಳಲ್ಲಿ ಯೋಗಿಯ ಅಭಿನಯವನ್ನು ಕಂಡು ಜನ ಖುಷಿ ಪಟ್ಟಿದ್ದರು. ಇಂಥ ಯೋಗಿ ಈಗ ಲೀಡರ್ ಶಿವರಾಜ್ ಕುಮಾರ್ ಅವರ ಸಹಪಾಠಿಯಾಗಿದ್ದಾರೆ. ಈ ಚಿತ್ರಕ್ಕೆ ವೀರಸಮರ್ಥ್ ಸಂಗೀತ, ಗುರು ಪ್ರಶಾಂತ್ ರೈ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin