ಮಲ್ಯ ವಿರುದ್ಧ ಹೊಸ ಕೇಸು ದಾಖಲಿಸಿದ ಸಿಬಿಐ

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya

ನವದೆಹಲಿ, ಆ.13-ಎಸ್‍ಬಿಐ ಸಾಲ ಸುಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕ ಸುಸ್ತಿದಾರ ಉದ್ಯಮಿ ವಿಜಯ್‍ಮಲ್ಯ ವಿರುದ್ಧ ಸಿಬಿಐ ಹೊಸ ಪ್ರಕರಣವೊಂದು ದಾಖಲಿಸಿಕೊಂಡಿದ್ದು, ಮದ್ಯದ ದೊರೆಗೆ ಇನ್ನೊಂದು ಕಂಟಕ ಎದುರಾಗಿದೆ. ವಿವಿಧ ಬ್ಯಾಂಕ್‍ಗಳಿಮದ 9 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲ ಪಡೆದು ಸುಸ್ತಿದಾರರಾಗಿರುವ ಮಲ್ಯ ಒಂದಿಲ್ಲೊಂದು ಕಾನೂನು ಉರುಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಕೋಟ್ಯಂತರ ರೂಪಾಯಿ ಸಾಲಕ್ಕೆ ಸುಸ್ತಿದಾರರಾಗಿರುವ ಮಲ್ಯ ವಿರುದ್ಧ ಕೇಂದ್ರೀಯ ತನಿಖಾ ದಳ-ಸಿಬಿಐ ಹೊಸ ಕೇಸ್ ಬುಕ್ ಮಾಡಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin