ಮಲ್ಲಸಂದ್ರದ ಹೊರವಲಯದಲ್ಲಿ ಚಿರತೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Chita--01

ಗೌರಿಬಿದನೂರು, ಡಿ.22-ತಾಲೂಕಿನ ತೊಂಡೇಬಾವಿ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ಚಿರತೆಯೊಂದು ಮೃತಪಟ್ಟಿರುವುದು ಪತ್ತೆಯಾಗಿದೆ. ಸುಮಾರು 4 ವರ್ಷದ ಗಂಡು ಚಿರತೆ ಮಲ್ಲಸಂದ್ರ ಗ್ರಾಮದ ಹೊರವಲಯದ ಬೆಟ್ಟಗಳ ತಪ್ಪಲಲ್ಲಿ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ತಿಪ್ಪಣ್ಣ ಎಂಬುವವರಿಗ ಸೇರಿದ ಹಸುವನ್ನು ಚಿರತೆ ಕಚ್ಚಿದ ಪರಿಣಾಮ ಹಸು ಸಾವನ್ನಪ್ಪಿದ್ದು, ಅದನ್ನು ಹೊಲದ ಬಳಿಯಲ್ಲೇ ಬಿಡಲಾಗಿದ್ದು, ಎರಡು ದಿನಗಳ ಹಿಂದೆ ರಾತ್ರಿವೇಳೆಯಲ್ಲಿ ಚಿರತೆ ಹಸುವನ್ನು ತಿಂದು ಹಾಕಿದ ನಂತರದ ದಿನದಲ್ಲಿ ಸಾವನ್ನಪ್ಪಿದೆ, ಕಾರಣ ತಿಪ್ಪಣ್ಣ ಅರಣ್ಯ ಇಲಾಖೆಯವರಿಗೆ ಚಿರತೆ ದಾಳಿಗೆ ಬಲಿಯಾದ ಹಸುವಿಗೆ ಪರಿಹಾರವನ್ನು ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು.

ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ವಲಯ ಅರಣ್ಯಾಧಿಕಾರಿ ಕೃಷ್ಣಾ, ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಸುಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದನಂತರವಷ್ಟೇ ಚಿರತೆಯ ಸಾವಿಗೆ ಕಾರಣ ತಿಳಿಯಲಿದೆ ಎಂದು ವಲಯ ಅರಣ್ಯಾಧಿಕಾರಿ ಕೃಷ್ಣಾ ತಿಳಿಸಿದ್ದಾರೆ.

Facebook Comments

Sri Raghav

Admin