ಮಳೆಗಾಗಿ ಹೂತಿದ್ದ ಶವ ತೆಗೆದು ಸುಟ್ಟರು..!

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಮಂಡ್ಯ, ಮೇ.9- ಮಳೆಯಾಗಲಿಲ್ಲ ಎಂದು ಹೂತಿದ್ದ ಹೆಣವನ್ನು ಹೊರತೆಗೆದು ಕೆಲವರು ಸುಟ್ಟು ಹಾಕಿರುವ ಘಟನೆ ಮದ್ದೂರು ತಾಲೂಕಿನ ಮಾಲಗಾರನಹಳ್ಳಿಯಲ್ಲಿ ನಡೆದಿದೆ.ಕಳೆದ ವರ್ಷ  ಅನಾರೋಗ್ಯದಿಂದ ರಾಮಣ್ಣ ಎಂಬುವರು (78) ಮೃತಪಟ್ಟಿದ್ದರು. ಶವವನ್ನು ಅವರ ಹೊಲದಲ್ಲೇ ಹೂತು ಅಂತ್ಯಕ್ರಿಯೆ ನಡೆಸಲಾಗಿತ್ತು.  ಆದರೆ, ನೆನ್ನೆ ರಾತ್ರಿ ಇದೇ ಗ್ರಾಮದ ಕೆಲವರು ಮೃತರ ಸಂಬಂಧಿಕರಿಗೆ ಮಾಹಿತಿ ನೀಡದೆಯೇ ಗೋರಿಯಿಂದ ಶವವನ್ನು ಹೊರತೆಗೆದು ಹತ್ತಿರದಲ್ಲೆ ಸುಟ್ಟುಹಾಕಿದ್ದಾರೆ. ಇಂದು ಬೆಳಗ್ಗೆ ಹೊಲದ ಕಡೆ ಹೋಗುತ್ತಿದ್ದ ಕೆಲವರು ಬೆಂಕಿ ನೋಡಿ ಹತ್ತಿರ ಹೋಗಿ ನೋಡಿದಾಗ ಶವ ಸುಟ್ಟಿರುವುದು ಗೊತ್ತಾಗಿದೆ.

ತಕ್ಷಣ ಇದರ ಮಾಹಿತಿ ಗ್ರಾಮಸ್ಥರಿಗೆ ತಿಳಿದು ಸ್ಥಳಕ್ಕೆ ಬಂದು ನೋಡಿದಾಗ ಹತ್ತಿರದಲ್ಲೇ ಗೋರಿಯನ್ನು ಅಗೆದಿರುವುದನ್ನು ನೋಡಿ ಇಲ್ಲಿ ಹೂತಿದ್ದ ಶವವನ್ನೆ ಸುಟ್ಟಿದ್ದಾರೆ ಎಂದು ಖಚಿತಪಡಿಸಿಕೊಂಡು ಗ್ರಾಮದ ಕೆಲವರು, ಮೃತರ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin