ಮಳೆಯಿಂದ ತತ್ತರಿಸಿದ್ದ ಮೈಸೂರು ಸಹಜ ಸ್ಥಿತಿಯತ್ತ

ಈ ಸುದ್ದಿಯನ್ನು ಶೇರ್ ಮಾಡಿ

Mysuru

ಮೈಸೂರು, ಸೆ.28- ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ತತ್ತರಿಸಿದ್ದ ಸಾಂಸ್ಕøತಿಕ ನಗರಿ ಇಂದು ಸಹಜ ಸ್ಥಿತಿಯತ್ತ ಮರಳಿದೆ. ಮಳೆಯಿಂದಾಗಿ ದಸರಾದ ವಿವಿಧ ಕಾರ್ಯಕ್ರಮಗಳಿಗೂ ಅಡ್ಡಿ ಉಂಟಾಗಿತ್ತು. ಆದರೆ ಇಂದು ಇಡೀ ನಗರ ದಸರಾ ವೈಭವದಿಂದ ಕಂಗೊಳಿಸುತ್ತಿದೆ.
ಕಳೆದ ಮಂಗಳವಾರ ರಾತ್ರಿ ಸತತವಾಗಿ 10 ಗಂಟೆಗಳಿಗೂ ಹೆಚ್ಚು ಕಾಲ ಸುರಿದಿದ್ದ ಭಾರೀ ಮಳೆಯಿಂದ ನಗರದ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಮಳೆಯಿಂದಾಗಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದಸರಾದ ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧೆಡೆ ಜನಜಂಗುಳಿಯೇ ನೆರೆದಿದ್ದು, ವರುಣನ ಕೃಪೆಯಿಂದ ಮೈಸೂರು ದಸರಾಗೆ ಎಂದಿನಂತೆ ಮೆರಗು ಬಂದಿದೆ.  ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಸಣ್ಣಪುಟ್ಟ ತೊರೆಗಳು ಹರಿಯುತ್ತಿದ್ದು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ನೀರು ಹರಿಯುತ್ತಿದೆ. ಸಣ್ಣ ಝರಿಯಂತೆ ನೀರು ಹರಿಯುತ್ತಿದ್ದು ಮೆಟ್ಟಿಲಗಳನ್ನು ಸರಾಗವಾಗಿ ಹತ್ತಿ ಹೋಗದ ಪರಿಸ್ಥಿತಿ ಇತ್ತು. ಇಂದು ಮಳೆ ನಿಂತಿದ್ದು, ದೇವಿಯ ದರ್ಶನಕ್ಕೆ ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ.  ಕೆರೆ ಕೋಡಿ ಬಿದ್ದ ನೀರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆ.ಸಿ ನಗರ ಬಡಾವಣೆಗೆ ಹರಿದು ಜಲಾವೃತವಾಗಿದ್ದ ರಸ್ತೆಗಳು ಸಹಜ ಸ್ಥಿತಿಗೆ ಬಂದಿದ್ದು, ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲೆ ಸಹಜ ಸ್ಥಿತಿಗೆ ಮರಳಿದೆ.

Facebook Comments

Sri Raghav

Admin