ಮಳೆಯಿಂದ ಬೆಳೆ ಹಾನಿ, ಗಗನಕ್ಕೇರಿದ ತರಕಾರಿ ಬೆಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ನ.16- ಸೆಲೆಕ್ಟಿವ್ ಸೆರೋಟೊನಿನ್ ರಿ ಅಪ್‍ಟೇಕ್ ಇನ್‍ಹಿಬಿಟರ್ಸ್(ಎಸ್‍ಎಸ್‍ಆರ್‍ಐಎಸ್) ಎಂದು ಕರೆಯಲಾಗುವ ವರ್ಗದ ಖಿನ್ನತೆ ನಿವಾರಕಗಳನ್ನು ಸೇವಿಸುವವರು ಈ ಔಷಧಗಳನ್ನು ಸೇವಿಸದೆ ಇರುವವರಿಗಿಂತ ಕೋವಿಡ್-19ನಿಂದ ಮರಣಿಸುವ ಪ್ರಮಾಣ ಕಡಿಮೆ ಎಂದು ಅಮೆರಿಕದಾದ್ಯಂತದ 87 ಆರೋಗ್ಯ ಕೇಂದ್ರಗಳ ಆರೋಗ್ಯ ದಾಖಲೆಗಳ ವ್ಯಾಪಕ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಸೋಮವಾರ ಜಾಮಾ ನೆಟ್‍ವರ್ಕ್ ನಿಯತಕಾಲಿಕದಲ್ಲಿ ಈ ಸಂಶೋಧನೆ ಪ್ರಕಟಗೊಂಡಿದೆ. ಎಸ್‍ಆರ್‍ಐಗಳು ಕೋವಿಡ್-19ರ ಅತಿ ಗಂಭೀರ ಪರಿಣಾಮಗಳ ವಿರುದ್ದ ಪ್ರಯೋಜನಕಾರಿ ಆಗಿದೆ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ತತ್‍ಕ್ಷಣದ ಕ್ಲಿನಿಕಲ್ ಪ್ರಯೋಗಗಳು ನಡೆಯಬೇಕಾಗಿದೆ.

ನಾವು ಈ ಔಷಧಗಳಿಂದಲೇ ಈ ಪರಿಣಾಮಗಳಾಗುತ್ತಿವೆ ಎಂದು ಹೇಳಲಾಗದು. ಆದರೆ 60 ಅಂಕಿಅಂಶಗಳ ವಿಶ್ಲೇಷಣೆಯು ಈ ಔಷಧಗಳು ಪರಿಣಾಮಕಾರಿ ಎಂದು ತಿಳಿಸಿರುವುದಾಗಿ ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಹ ಪ್ರಾಧ್ಯಾಪಕಿ ಮರೀನಾ ಸಿರೋಟಾ ವಿವರಿಸಿದ್ದಾರೆ. ಅಮೆರಿಕಾದಾದ್ಯಂತ ಸುಮಾರು 5 ಲಕ್ಷ ರೋಗಿಗಳ ಮಾಹಿತಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು.

Facebook Comments

Sri Raghav

Admin