ಮಳೆಯಿಂದ ಮುಳುಗಿದ ಮುಂಬೈ : ವಿಮಾನ-ರೈಲು ಸಂಚಾರ ವ್ಯತ್ಯಯ,ಶಾಲಾ ಕಾಲೇಜುಗಳಿಗೆ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

Mumbai-Rain--01

ಮುಂಬೈ, ಸೆ.20-ಕೆಲವು ದಿನಗಳ ಹಿಂದಷ್ಟೇ ಭಾರೀ ಮಳೆಯಿಂದ ತತ್ತರಿಸಿದ್ದ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮತ್ತೆ ವರುಣನ ಆರ್ಭಟದಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೈಲು, ರಸ್ತೆ ಮತ್ತು ವಾಯು ಸಂಚಾರ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.  ನಿನ್ನೆ ನಿರಂತರ ವರ್ಷಧಾರೆಯಿಂದ ವಿವಿಧ ನಿಲ್ದಾಣಗಳಲ್ಲಿ ಇಡೀ ರಾತ್ರಿ ಆಶ್ರಯ ಪಡೆದಿದ್ದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ. ಇಂದು ಬೆಳಗ್ಗೆಯಿಂದ ವರುಣರಾಯ ಬಿಡುವು ನೀಡಿದ್ದರೂ, ಮತ್ತೆ ಅಬ್ಬರಿಸುವ ಮುನ್ಸೂಚನೆ ಇದೆ. ಮುಂಬೈ ಮತ್ತು ರಾಯ್‍ಗಢ್ ಜಿಲ್ಲೆಯಲ್ಲಿ ಮುಂದಿನ 24 ತಾಸುಗಳಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Mumbai  01

ಕಳೆದ ರಾತ್ರಿ 8.30 ರಿಂದ 11.30ರ ಅವಧಿಯಲ್ಲಿ 225.3 ಮಿ.ಮೀ. ದಾಖಲೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಸಬ್‍ಅರ್ಬನ್ ರೈಲು ಸೇವೆಗಳು ಸ್ಥಗಿತಗೊಂಡಿವೆ. ಇತರ ರಾಜ್ಯಗಳ ರೈಲು ಸಂಚಾರ ನಿಲುಗಡೆಯಾಗಿದೆ. ಮುಂಬೈನಲ್ಲಿ ನಿನ್ನೆಯಿಂದ ವಾಯು ಸಂಚಾರಕ್ಕೆ ಅಡಚಣೆಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

Mumbai  06

ಇಂದು ಕೂಡ ಮಳೆಯಿಂದಾಗಿ ಕೆಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ.  ಭಾರೀ ಮಳೆ ಕಾರಣ ಮುಂಬೈನಲ್ಲಿ ಕಚೇರಿ ಉದ್ಯೋಗಿಗಳಿಗೆ ಸುಮಾರು 2 ಲಕ್ಷ ಟಿಫಿನ್ ಬಾಕ್ಸ್‍ಗಳನ್ನು ಪೂರೈಕೆ ಮಾಡುವ ಡಬ್ಬಾ ವಾಲಾಗಳು ಸಹ ಇಂದು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.   ಇತ್ತೀಚೆಗೆ ಮುಂಬೈನಲ್ಲಿ ಸುರಿದ ಮಹಾಮಳೆಗೆ 14 ಮಂದಿ ಮೃತಪಟ್ಟು 20 ಲಕ್ಷಕ್ಕೂ ಹೆಚ್ಚುಜನ ಸಂತ್ರಸ್ತರಾಗಿದ್ದರು.

Mubai  03

Facebook Comments

Sri Raghav

Admin