ಮಳೆ, ಪ್ರವಾಹದ ರುದ್ರ ನರ್ತನಕ್ಕೆ ಮೇದಕ್‌ನಲ್ಲಿ 8 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

medha-l

ಶ್ರೀರಂಗಾರೆಡ್ಡಿ (ತೆಲಂಗಾಣ), ಸೆ.25- ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ವರುಣನ ರೌದ್ರಾವತಾರಕ್ಕೆ ಬಲಿಯಾದವರ ಸಂಖ್ಯೆ 8ಕ್ಕೇರಿದೆ. ನಿನ್ನೆಯಿಂದ ಈ ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಒಟ್ಟು 8 ಮಂದಿ ಬಲಿಯಾಗಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ. ಪ್ರವಾಹದಿಂದ ನೂರಾರು ಮಂದಿ ಸಂತಸ್ತ್ರರಾಗಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸೇನೆ ನೆರವನ್ನು ಬಳಸಲಾಗುತ್ತಿದೆ.

23 ಜನರ ರಕ್ಷಣೆಗೆ ಹರಸಾಹಸ :

ಪ್ರವಾಹದಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಂಜಿರಾ ನದಿಯಲ್ಲಿ ಸಿಲುಕಿರುವ 23 ಕೂಲಿ ಕಾರ್ಮಿಕರ ರಕ್ಷಣೆಗಾಗಿ ಭಾರತೀಯ ವಾಯಪಡೆಯ ಎರಡು ಹೆಲಿಕಾಪ್ಟರ್‌ಗಳು ಶ್ರಮಿಸುತ್ತಿವೆ.  ಮಧ್ಯಪ್ರದೇಶ ಮತ್ತು ಒಡಿಶಾದ ಸುಮಾರು 23 ಜನರು ಗೋದಾವರಿ ನದಿಯ ಉಪನದಿಯಾದ ಮಂಜಿರಾ ಪ್ರವಾಹದಲ್ಲಿ ಸಿಲುಕಿದ್ದು, ಅವರ ರಕ್ಷಣೆಗಾಗಿ ನಿನ್ನೆ ರಾತ್ರಿಯಿಂದ ತೀವ್ರ ಪ್ರಯತ್ನಗಳು ಮುಂದುವರಿದಿವೆ. ತೀವ್ರ ಪ್ರತಿಕೂಲ ವಾತಾವರಣದಿಂದ ಐಎಎಫ್‌ನ ಎರಡು ಹೆಲಿಕಾಪ್ಟರ್‌ಗಳು ನಿನ್ನೆ ಹೈದರಾಬಾದ್‌ನ ತನ್ನ ನೆಲೆಯಿಂದ ಹಾರಾಟ ನಡೆಸಲು ಸಾಧ್ಯವಾಗಲಿಲ್ಲ. ಇಂದು ಬೆಳಿಗ್ಗೆಯಿಂದ ರಕ್ಷಣೆ ಕಾರ್ಯಕ್ಕೆ ಇಳಿದಿರುವ ಹೆಲಿಕಾಪ್ಟರ್‌ಗಳು ಸಂತ್ರಸ್ತರನ್ನು ರಕ್ಷಿಸಲು ಶ್ರಮಿಸುತ್ತಿವೆ. ಮಂಜಿರಾ ನದಿ ಬಳಿ ಈ ಕಾರ್ಮಿಕರನ್ನು ಮೂರು ಸೇತುವೆಗಳ ನಿರ್ಮಾಣಕ್ಕಾಗಿ ನಿಯೋಜಿಸಲಾಗಿತ್ತು. ನದಿಗೆ ಅನತಿ ದೂರದಲ್ಲಿ ಇವರು ತಾತ್ಕಾಲಿಕ ಷೆಡ್‌ಗಳಲ್ಲಿ ನೆಲೆಸಿದ್ದರು. ನಿನ್ನೆ ಕೆಲಸ ಮುಗಿದ ನಂತರ ತಮ್ಮ ಟೆಂಟ್‌ಗಳಿಗೆ ತೆರಳುತ್ತಿದ್ದ ಅವರಿಗೆ ಸಾರ್ವಜನಿಕರು ಮಂಜಿರಾ ನದಿ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಇವರು ಅಪಾಯದಲ್ಲಿ ಸಿಲುಕಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin