ಮಳೆ-ಬೆಳೆಗಾಗಿ ಮರ ಬೆಳಸಿ : ತಿಮ್ಮಕ್ಕ ತಿಳಿಸಿದರು

ಈ ಸುದ್ದಿಯನ್ನು ಶೇರ್ ಮಾಡಿ

salumarada-thimmakka
ಹಿರೀಸಾವೆ, ಫೆ.23- ದೇಶದಲ್ಲಿ ಚನ್ನಾಗಿ ಮಳೆ, ಬೆಳೆ ಆಗಲು ದೇಶದ ಜನ ಸುಭಿಕ್ಷವಾಗಿ ಬಾಳಲು ಬಸವಣ್ಣ (ಹಸು) ನನ್ನು ಪೂಜಿಸಿ ಬಸವಣ್ಣನ ಜಾತ್ರೆಯನ್ನು ಮಾಡಿ ಎಂದು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೇಳಿದರು.ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಮಿನಿ ಮಸ್ಕ್ ಚಿತ್ರಮಂದಿರ ಉದ್ಘಾಟನಾ ಕಾಯಕ್ರಮದಲ್ಲಿ ಮಾತನಾಡಿದ ಅವರು, ಬಡ ಕುಟುಂಬದಲ್ಲಿ ಹುಟ್ಟಿದ ನಾನು ಬಡವನನ್ನು ಮದುವೆಯಾಗಿ ನಾನು ಮತ್ತು ನನ್ನ ಪತಿ ಇಬ್ಬರೂ ರಸ್ತೆ ಪಕ್ಕದಲ್ಲಿ ಗಿಡ ನೆಟ್ಟು ಸ್ವಂತ ಮಕ್ಕಳಂತೆ ಕೂಲಿ ಕೆಲಸ ಮಾಡಿಕೊಂಡು ಪೋಷಿಸುವ ಕಾಯಕವನ್ನು ಸುಮಾರು 40 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ. ಇಂದು ಈ ಮರಗಳು ಚನ್ನಾಗಿ ಬೆಳೆದು ದೊಡ್ಡಮರಗಳಾಗಿ ಬೆಳೆದಿವೆ, ಆದರೂ ಇಂದಿಗೂ ಸಹ ಯಾರೂ ಈ ಮರಗಳನ್ನು ಕಡಿದಿಲ್ಲ ಎಂದು ಹೇಳಿದರು. ಮರಗಳೇ ಈ ದೇಶದ ಆಸ್ತಿ.

ಮರ ಬೆಳೆಸಿ ಕಾಡನ್ನು ರಕ್ಷಿಸಿ ಈ ಮರಗಳನ್ನು ನೆಟ್ಟು ಪೋಶಿಸುವ ಕಾಯಕವನ್ನು ಮಕ್ಕಳೂ, ದೊಡ್ಡವರೂ ಮಾಡಬೇಕು. ಜಾನುವಾರುಗಳೇ ರೈತರ ಆಸ್ತಿ. ಜಾನುವಾರುಗಳನ್ನು ಕಟುಕರಿಗೆ ಕೊಡಬೇಡಿ ಎಂದು ಕಿವಿಮಾತು ಹೇಳಿದರು.ಜಿಪಂ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಮಾತನಾಡಿ, ಹಿರಿಯರಾದ ಸಾಲುಮರದ ತಿಮ್ಮಕ್ಕನವರ ಮನಸ್ಸು ಕಲ್ಮಶವಿಲ್ಲದ ಶುದ್ಧ ಮನಸ್ಸು. ಅವರಲ್ಲಿರುವ ದೇಶಾಭಿಮಾನ ಎಲ್ಲರಲ್ಲೂ ಬರಬೇಕು. ಅವರ ಜೀವನದ ಶೈಲಿಯ ಮಾದರಿಯನ್ನು ಇಂದಿನ ಪೀಳಿಗೆಯವರು ಕಲಿತುಕೊಳ್ಳಬೇಕು ಎಂದು ನುಡಿದರು.ನಾವುಗಳೆಲ್ಲರೂ ಒಂದೊಂದು ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡಬೇಕಾಗಿದೆ. ನಾಡನ್ನು ಕಾಪಾಡಬೇಕಾಗಿದೆ. ಪರಿಸರ ಚನ್ನಾಗಿದ್ದರೆ ನಾವೆಲ್ಲರೂ ಚನ್ನಾಗಿರುತ್ತೇವೆ ಎಂದರು.ಜಿಪಂ ಸದಸ್ಯ ಸಿ. ಮಂಜೇಗೌಡ, ಗ್ರಾಪಂ ಅಧ್ಯಕ್ಷ ಎಚ್.ಜೆ. ಮಹೇಶ್, ರೈತ ಸಂಘ ಮತ್ತು ಹಸಿರು ಸೇನೆಯ ಹೋಬಳಿ ಅಧ್ಯಕ್ಷ ಎಚ್.ವಿ. ಕೃಷ್ಣೇಗೌಡ. ಮಸ್ಕ್ ಚಿತ್ರಮಂದಿರದ ಮಾಲೀಕ ಕೆಂಗೇಗೌಡ ಮತ್ತು ಕುಟುಂಬದವರು ವೇದಿಕೆಯಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin