ಮಳೆ ಬೆಳೆ ಕಾಣದೆ ಸಾಲ ಭಾದೆ : ಮೃತ ರೈತ ಕುಟುಂಬಕ್ಕೆ ಧನಸಹಾಯ

ಈ ಸುದ್ದಿಯನ್ನು ಶೇರ್ ಮಾಡಿ

7
ಹುನಗುಂದ,ಮಾ.17- ಮಳೆ ಬೆಳೆ ಕಾಣದೆ ಸಾಲ ಭಾದೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅಮರಾವತಿ ಗ್ರಾಮದ ಚನ್ನಪ್ಪ ಅಮಾತೆಪ್ಪ ಗಾಣಿಗೇರ ಅವರ ಪತ್ನಿಗೆ ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಡಾ. ಆರ್. ಮಾರುತೇಶ ಅವರು 20 ಸಾವಿರ ರೂ.ಗಳ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ತಮಗಾದ ಆರ್ಥಿಕ ಮತ್ತು ಮಾನಸಿಕ ಸಂಕಷ್ಟದಿಂದ ಪಾರಾಗಲು ಆತ್ಮಹತ್ಯೆಯೊಂದೇ ಪರಿಹಾರವಲ್ಲ. ರೈತರೆಲ್ಲರೂ ಒಗ್ಗಟ್ಟಾಗಿ ಸಮಸ್ಯೆಯ ಪರಿಹಾರಕ್ಕಾಗಿ ಚಿಂತನ ಮಂಥನ ಮಾಡಿ ಆತ್ಮವಿಶ್ವಾಸದಿಂದ ಹಾಗೂ ಧೈರ್ಯ ಹೊಂದಿ ಸಂಘಟಿತ ಹೋರಾಟ ಒಂದೇ ಪರಿಹಾರ ಹೊರತು ಆತ್ಮಹತ್ಯೆ ಪರಿಹಾರವಲ್ಲ? ವಿಶ್ವಕ್ಕೆ ಅನ್ನ ನೀಡುವ ಅನ್ನದಾತ ಸಂಕಷ್ಟಕ್ಕೆ ಸಿಲುಕಿದಾಗ ಸಮಾಜದ ಪ್ರತಿಯೊಬ್ಬರು ರೈತನ ಬೆಂಬಲ ನಿಲ್ಲಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ನಿಮ್ಮ ಕುಟುಂಬಕ್ಕೆ ನನ್ನ ವೈಯಕ್ತಿಕ ಪರಿಹಾರದ ಜೊತೆಗೆ ಸರ್ಕಾರದಿಂದ ಬರುವ ಪರಿಹಾರಕ್ಕಾಗಿ ನಾವು ನಿಮ್ಮ ಜೊತೆಗೆ ಇರುತ್ತೆವೆ ಎಂದು ಹೇಳಿದರು. ವೀರೇಶ ಕೂಡಲಗಿಮಠ, ರಾಜ್ಯ ಹಾಲ ಪ್ರಕೋಸ್ಟ ಸಹ ಸಂಚಾಲಕ ಮಲ್ಲಿಕಾರ್ಜುನ ಶೆಟ್ಟರ, ಪಿಕೆಪಿಎಸ್ ಅಧ್ಯಕ್ಷ ಮೃತ್ಯಂಜಯ ಕಪರದಮಠ, ವಿಜಯ ಪಾಟೀಲ(ಎಂ.ಎಸ್)ಶಿವು ಕಾಟ್ಟಾಪೂರ, ಮಲ್ಲು ಮಡಿವಾಳರ, ವಾಸು ರಾಠೋಡ, ಅನೀಲ ಹಗರಿ, ತುಕಾರಾಮ ಭಜಂತ್ರಿ ಗ್ಯಾನಪ್ಪ ತಳವಾರ ಇನ್ನೂ ಅನೇಕರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin